ಹುಬ್ಬಳ್ಳಿಯ ಕಿರೇಸೂರ ಬಳಿ ಅಪಘಾತ: ಅಪ್ಪ, ಮಗ, ಮೊಮ್ಮಗ ದುರ್ಮರಣ…

ಹುಬ್ಬಳ್ಳಿ: ಓಮಿನಿ ವಾಹನ ಹಾಗೂ ಲಾರಿಯ ನಡುವೆ ಭೀಕರ ಅಪಘಾತದಲ್ಲಿ 6ವರ್ಷದ ಮಗು ಸೇರಿ ಮೂವರು ದುರ್ಮರಣಕ್ಕೀಡಾದ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಬಳಿ ಸಂಭವಿಸಿದೆ.
ಮೃತರು ಕೊಪ್ಪಳ ತಾಲೂಕಿನ ಮಂಗಳಾಪೂರ ಗ್ರಾಮದ ಒಂದೇ ಕುಟುಂಬದ ಜಾಫರಸಾಬ ಮಂಗಳೂರು (60), ಮುಸ್ತಫಾ (ಸಾಹೇಬ) ಮಂಗಳೂರು (36) ಮತ್ತು ಶೊಹೇಬ್ ಮಂಗಳೂರು (06) ಎಂದು ಗುರುತಿಸಲಾಗಿದೆ.
ಪ್ರಕರಣದಲ್ಲಿ ಮೂವರು ಗಾಯಗೊಂಡಿದ್ದು, ಧಾರವಾಡದ ಎಸ್‌ಡಿಎಂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ.
ಮೃತರು ಜಾಫರಸಾಬ ಮತ್ತು ಮಗ ಮುಸ್ತಫಾ (ಸಾಹೇಬ) ಹಾಗೂ ಮೊಮ್ಮಗ ಶೊಹೇಬ್ ಆಗಿದ್ದು, ತಡರಾತ್ರಿ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಬಳಿ ಘಟನೆ ಸಂಭವಿಸಿತ್ತು.