ಡಿಡಿಪಿಐ ಕಚೇರಿಯಲ್ಲಿ “ದಲಿತ ಅಧಿಕಾರಿಗೆ ಅನ್ಯಾಯ”- ಸರಿಪಡಿಸದಿದ್ದರೇ…. ಡಿ.ಶಿವಶಂಕರ ಎಚ್ಚರಿಕೆ…!!!
1 min readಧಾರವಾಡ: ಜಿಲ್ಲಾ ಶಾಲಾ ಶಿಕ್ಷಣ ಉಪನಿರ್ದೇಶಕರ ಕಚೇರಿಯಲ್ಲಿ ವರ್ಗಾವಣೆಯಿಂದ ಖಾಲಿಯಿದ್ದ ಹುದ್ದೆಯನ್ನ ಕಾನೂನು ಮೀರಿ ನೀಡುವ ಮೂಲಕ ದಲಿತ ಅಧಿಕಾರಿಗೆ ಅನ್ಯಾಯ ಮಾಡಲಾಗಿದೆ. ಇದನ್ನ ಸರಿಪಡಿಸದಿದ್ದರೇ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಎಸ್ಸಿ,ಎಸ್ಟಿ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಿ.ಶಿವಶಂಕರ ಎಚ್ಚರಿಕೆ ನೀಡಿದರು.
ಪತ್ರಾಂಕಿತ ವ್ಯವಸ್ಥಾಪಕ ಹುದ್ದೆ ನೀಡಲು ಅರ್ಹತೆ ಮತ್ತು ನಿಯಮ ಪಾಲನೆ ಮಾಡಲಾಗಿಲ್ಲ. ಅರ್ಹತೆಯಿರುವ ಅಧಿಕಾರಿ ದಲಿತ ಅನ್ನುವ ಕಾರಣಕ್ಕೆ ಹುದ್ದೆಯನ್ನ ನೀಡದೇ ಇರುವುದನ್ನ ಸಹಿಸುವುದಿಲ್ಲ ಎಂದು ಡಿ.ಶಿವಶಂಕರ ಆಕ್ರೋಶ ವ್ಯಕ್ತಪಡಿಸಿದರು.
ವೀಡಿಯೋ…
ಧಾರವಾಡದ ಡಿಡಿಪಿಐ ಕಚೇರಿಯಲ್ಲಿ ವರ್ಗಾವಣೆಯಿಂದ ತೆರವಾದ ಹುದ್ದೆಗೆ ದಲಿತ ಅಭ್ಯರ್ಥಿ ಅರ್ಹರಿದ್ದರೂ, ಪೆಂಗ್ ಅಧೀಕ್ಷಕನೋರ್ವ ಡಿಡಿಪಿಐ ಎಸ್.ಎಸ್.ಕೆಳದಿಮಠ ಜೊತೆಗೂಡಿ ಅರ್ಹರಲ್ಲದವರಿಗೆ ಪ್ರಭಾರ ನೀಡಲಾಗಿದೆ ಎಂಬ ಆರೋಪವಿದೆ.