ರಹಸ್ಯ ಕಾರ್ಯಾಚರಣೆ- ಪಿಸ್ತೂಲ್ ತೋರಿಸಿ ಆರೋಪಿಯನ್ನ ತಂದ ಹುಬ್ಬಳ್ಳಿ ಗ್ರಾಮೀಣ ಪೊಲೀಸರು… Exclusive Video
ರಹಸ್ಯ ಕಾರ್ಯಾಚರಣೆ ಮೂಲಕ ಆರೋಪಿ ಸೆರೆ
ಅಂತರ್‌ರಾಜ್ಯ ಕಳ್ಳನಿಗೆ ಕೊಳ ಹಾಕಿದ ಗ್ರಾಮೀಣ ಹುಬ್ಬಳ್ಳಿ ಠಾಣೆ ಪೊಲೀಸರು
ವಿಜಯಪುರ: ಹುಬ್ಬಳ್ಳಿಯ ತಾರಿಹಾಳದ ಕೈಗಾರಿಕಾ ಪ್ರದೇಶದಲ್ಲಿನ ಪ್ಯಾಕ್ಟರಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ತಾಮ್ರದ ತಂತಿ ಕದ್ದು ಪರಾರಿಯಾಗಿರುವ ನಟೋರಿಯಸ್ ಅಂತರ್‌ರಾಜ್ಯ ಖದೀಮನನ್ನ ಹಿಡಿದು ತರುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರ ತಂಡ ಯಶಸ್ವಿಯಾಗಿದೆ.
ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ಅವರ ಮಾಹಿತಿ ಆಧರಿಸಿ ವಿಜಯಪುರಕ್ಕೆ ತೆರಳಿದ್ದ ಎಎಸ್ಐ ಹೊನ್ನಪ್ಪನವರ ತಂಡ ಆರೋಪಿ ಅವಿನಾಶನನ್ನ ಹಿಡಿದ ತಕ್ಷಣವೇ ಹೈಡ್ರಾಮಾ ನಡೆದಿದ್ದು, ಜಾಗೃತಗೊಂಡ ಪೊಲೀಸರು ಸಿನೀಮಯ ಮಾದರಿಯಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ.
ಎಕ್ಸಕ್ಲೂಸಿವ್ ವೀಡಿಯೋ…
ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಿನ್ನೆ ಮಧ್ಯಾಹ್ನ ಘಟನೆ ನಡೆದಿದ್ದು, ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಆರೋಪಿ ಅವಿನಾಶ್ ಮಚ್ಚಾಳೆಯನ್ನ ಬಂಧಿಸಿದ್ದಾರೆ.
ಕುಟುಂಬಸ್ಥರೊಂದಿಗೆ ಆರೋಪಿ ಅವಿನಾಶ್ ವಿಜಯಪುರದಲ್ಲಿದ್ದಾನೆ ಎಂಬ ಮಾಹಿತಿ ಆಧರಿಸಿ ವಿಜಯಪುರಕ್ಕೆ ಆಗಮಿದ್ದ ಪೊಲೀಸ್ ಪಡೆ, ಅವಿನಾಶ್ ಬಂಧನಕ್ಕೆ ಮುಫ್ತಿಯಲ್ಲಿದ್ದ ಪೊಲೀಸರು ಮುಂದಾಗುತ್ತಿದ್ದಂತೆ ಆತನ ಕುಟುಂಬದ ಮಹಿಳೆಯರಿಂದ ಪೊಲೀಸರ ಮೇಲೆ ಹಲ್ಲೆ ಯತ್ನ ಹಾಗೂ ಗಲಾಟೆ ನಡೆದಿದೆ.
ಗಲಾಟೆಯ ಕಾರಣ ಸ್ಥಳದಲ್ಲಿ ಜನ ಜಮಾಯಿಸಿದ್ದರು. ಈ ವೇಳೆ ಆರೋಪಿ ಅವಿನಾಶ್ ಪರಾರಿಯಾಗಲು ಯತ್ನಿಸಿದಾಗ, ಆರೋಪಿಯನ್ನ ಹಿಡಿಯಲು ಪಿಸ್ತೂಲ್‌ನ್ನ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್ಐ ಹೊನ್ನಪ್ಪನವರ ಹೊರತೆಗೆದ ಘಟನೆಯೂ ನಡೆದಿದೆ.
