ಧಾರವಾಡದ ವೆಂಕಟಾಪೂರದಲ್ಲಿ ಬಿದ್ದ ಮನೆ- ಯಜಮಾನ ಸಾವು, ಯಜಮಾನಿ ಸ್ಥಿತಿ ಗಂಭೀರ…

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಡುಗೆ ಮಾಡುತ್ತಿದ್ದ ಸಮಯದಲ್ಲಿ ಮನೆಯೊಂದು ಕುಸಿದ ಪರಿಣಾಮ ಮನೆ ಯಜಮಾನ ಸಾವಿಗೀಡಾಗಿದ್ದು, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ವೆಂಕಟಾಪೂರದಲ್ಲಿ ಘಟನೆ ನಡೆದಿದ್ದು, ಯಲ್ಲಪ್ಪ ಇಟ್ಟಿಯವರ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಘಟನೆಯಲ್ಲಿ ಯಲ್ಲಪ್ಪ ಅವರ ಮಡದಿ ಹನಮವ್ವ ಮತ್ತು ಮಗಳು ಯಲ್ಲವ್ವ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.