ತೀವ್ರ ಹೃದಯಾಘಾತ: ವಿನಯ ಕುಲಕರ್ಣಿಯವರ ಆಪ್ತ ಮಲ್ಲು ಪೂಜಾರ ಇನ್ನಿಲ್ಲ….

ಧಾರವಾಡ: ಇಲ್ಲಿಯ ಶಿವಗಿರಿ ನಿವಾಸಿ ಮೂಲತಃ ಕುಂದಗೋಳ ನಿವಾಸಿ ಮಲ್ಲಿಕಾರ್ಜುನ್ ಈಶ್ವರಪ್ಪ ಪೂಜಾರ (56) ಸೋಮವಾರ ಸಂಜೆ ತೀವ್ರ ಹೃದಯಾಘಾತದಿಂದ ನಿಧನರಾದರು.
ಮೃತರಿಗೆ ತಾಯಿ, ಪತ್ನಿ, ಮಗಳು, ಮಗ ಸೇರಿದಂತೆ ಅಪಾರ ಬಂಧುಗಳು ಇದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಮಂಗಳವಾರ ಕುಂದಗೋಳದ ರುದ್ರ ಭೂಮಿಯಲ್ಲಿ 1ಗಂಟೆಗೆ ಜರುಗಲಿದೆ.
ಸಂತಾಪ: ಮೃತರಿಗೆ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಅಪಾರ ಜನರು ಸಂತಾಪ ಸೂಚಿಸಿದ್ದಾರೆ.