ಗಿರಿಯಾಲದಲ್ಲಿ “ಅಪ್ಪ”ನ ಹೊಡೆದುರುಳಿಸಿ “ಅಡಗಿ” ಕೂತವನ “ಅಂಡಿಗೇಟು” ನೀಡಿದ ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ…!!!

ಹುಬ್ಬಳ್ಳಿ: ಜೀವ ಕೊಟ್ಟ ತಂದೆಯ ಜೀವವನ್ನ ತೆಗೆದು ಅಡಗಿ ಕೂತಿದ್ದ ನೀಚ ಮಗನನ್ನ ಕೆಲವೇ ನಿಮಿಷಗಳಲ್ಲಿ ಬಂಧಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ಸಂಭವಿಸಿದೆ.
58 ವರ್ಷದ ಉಮೇಶ ಸುಡಕೇನವರ ಎಂಬಾತನನ್ನ ಈತನ ಮಗ ಹನಮಂತಪ್ಪ ಸಲಾಕೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ಅವರು, ಆರೋಪಿಯನ್ನ ಬಂಧಿಸಿದ್ದಾರೆ.
ಕೆಲಸ ಮಾಡದ ಮಗನಿಗೆ ಬುದ್ಧಿವಾದ ಹೇಳಿದ್ದೆ ತಂದೆಗೆ ಸಾವು ಬರಲು ಕಾರಣವಾಗಿದೆ. ಪ್ರಕರಣ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.