KMF ಅಧ್ಯಕ್ಷಗಿರಿ ಚುನಾವಣೆ- ಶಂಕರ ಮುಗದ, ಶಿವಲೀಲಾ ಕುಲಕರ್ಣಿ ಸೇರಿ ನಾಲ್ವರಿಂದ ನಾಮಪತ್ರ ಸಲ್ಲಿಕೆ…!!!

ಧಾರವಾಡ: ಕರ್ನಾಟಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷಗಿರಿಗಾಗಿ ಇಂದು ಚುನಾವಣೆ ನಡೆಯುತ್ತಿದ್ದು, ನಾಲ್ವರು ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಹಾಲಿ ಅಧ್ಯಕ್ಷ ಶಂಕರ ಮುಗದ, ಶಾಸಕ ವಿನಯ ಕುಲಕರ್ಣಿ ಅವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ, ನೀಲಕಂಠ ಅಸೂಟಿ ಹಾಗೂ ಗೀತಾ ಮರಿಲಿಂಗಣ್ಣನವರ ನಾಮಪತ್ರ ಸಲ್ಲಿಸಿದ್ದಾರೆ.
ಮಧ್ಯಾಹ್ನದವರೆಗೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಕೊನೆಯಲ್ಲಿ ಯಾರೂ ನಾಮಪತ್ರ ಹಿಂದೆ ಪಡೆಯುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.