ಹುಬ್ಬಳ್ಳಿಯ ನಾಲ್ಕು ದಿಕ್ಕಿನಿಂದ ಐವರನ್ನ ಬಂಧಿಸಿದ ಇನ್ಸಪೆಕ್ಟರ್ ಅಲಿ ಶೇಖ ಟೀಂ…!!!
1 min readಅಂತರರಾಜ್ಯದಿಂದ ಗಾಂಜಾ ತಂದು ಮಾರಾಟ; ಐದು ಜನರನ್ನು ಕಂಬಿ ಹಿಂದೆ ತಳ್ಳಿದ ಬೆಂಡಿಗೇರಿ ಠಾಣೆಯ ಪೊಲೀಸ್
ಹುಬ್ಬಳ್ಳಿ: ನಗರದಲ್ಲಿ ಅಕ್ರಮವಾಗಿ ಬೇರೆ ರಾಜ್ಯದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸಿದ ಅಪ್ರಾಪ್ತರು ಸೇರಿದಂತೆ ಒಟ್ಟು ಐದು ಜನ ಆರೋಪಿಗಳನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ವೀರಾಪುರ ಓಣಿಯ ಮುಬಾರಕ್, ಕೇಶ್ವಾಪುರದ ಚಂದ್ರಶೇಖರ, ರಾಮಲಿಂಗೇಶ್ವರ ನಗರದ ತೌಶಿಫ್ ಸೇರಿದಂತೆ ಇನ್ನಿಬ್ಬರು ಆರೋಪಿಗಳನ್ನು ಬೆಂಡಿಗೇರಿ ಠಾಣೆಯ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ಈ ಐದು ಜನ ಸಹ ಅಂತರಾಜ್ಯದಿಂದ ಗಾಂಜಾ ತಂದು ಅದನ್ನು ಹುಬ್ಬಳ್ಳಿಯ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ದಕ್ಷಿಣ ವಿಭಾಗದ ಎಸಿಪಿ ಚಿಕ್ಕಮಠ ಮಾರ್ಗದರ್ಶನದಲ್ಲಿ. ಬೆಂಡಿಗೇರಿ ಠಾಣೆಯ ಇನ್ಸಪೆಕ್ಟರ್ ಅಲಿ ಶೇಕ್ ಹಾಗೂ ಪಿಎಸ್ಐ ಶರಣ ದೇಸಾಯಿ ಸೇರಿದಂತೆ ಸಿಬ್ಬಂದಿಗಳಾದ ಚಿದಂಬರ, ನೂರಅಹ್ಮದ್, ರಾಮು, ಸೋಮು, ಹನುಮಂತ, ಬಸು, ದೀಪಕ, ಸುನಿಲ್ ಮಂಟೂರು ರಸ್ತೆಯಲ್ಲಿ ಆರೋಪಿಗಳನ್ನು ಬಂಧನ ಮಾಡಿ 3 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಸದ್ಯ ಐದು ಜನ ಆರೋಪಿಗಳ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿ ಇಬ್ಬರು ಅಪ್ರಾಪ್ತರನ್ನು ರಿಮ್ಯಾಂಡ್ ಹೋಮ್ ಗೆ ಹಾಗೂ ಇನ್ನುಳಿದ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬೆಂಡಿಗೇರಿ ಠಾಣೆಯ ಪೊಲೀಸರ ಕಾರ್ಯಕ್ಕೆ ಕಮೀಷನರ್ ರೇಣುಕಾ ಸುಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.