ಡಿಡಿಪಿಐ ಕೆಳದಿಮಠರೂ, ಅವರ ಪೈಲ್ ಮತ್ತೂ ಸಚಿವರಿಂದ ಪಾಠ-1,2 : ಧಾರವಾಡದ ಹಣೆಬರಹ ಹಿಂಗಿದೆ ನೋಡಿ…

ಧಾರವಾಡ: ಜಿಲ್ಲೆಯ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯವೈಖರಿಯ ಬಗ್ಗೆ ನೂರೆಂಟು ಬಾರಿ ಗೊತ್ತಾದರೂ, ಅವರಿಗೆ ತಿಳಿ ಹೇಳುವ ಪ್ರಯತ್ನವನ್ನ ಮಾತ್ರ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಬಿಡುತ್ತಿಲ್ಲ. ಹಂಗಂತ ಡಿಡಿಪಿಐ ಅವರು ಸುಧಾರಣೆಯಾಗುತ್ತಲೂ ಇಲ್ಲ.
ನಿನ್ನೆ ನಡೆದ ಕೆಡಿಪಿಯಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು, ಡಿಡಿಪಿಐ ಅವರಿಗೆ ಮೊದಲ ಪಾಠ ಮಾಡಿದ್ದರು.
ಪಾಠ-1 ವೀಡಿಯೋ..
ನಿನ್ನೆ ಇಷ್ಟೇಲ್ಲ ನಡೆದ ನಂತರ ಇಂದು ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಮತ್ತದೇ “ತಯಾರಿ” ನಡೆಸಿಕೊಂಡು ಬಂದಿದ್ರು ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು. ಆಗ ಮತ್ತೆ ಎರಡನೇಯ ಪಾಠವನ್ನ ಮಾಡುವ ಸ್ಥಿತಿ ಬಂದೊದಗಿತ್ತು.
ಪಾಠ-2 ವೀಡಿಯೋ
ಧಾರವಾಡ ಜಿಲ್ಲೆಯ ಶಿಕ್ಷಣ ವ್ಯವಸ್ಥೆ ಅಧೋಗತಿಗೆ ಸಾಗುತ್ತಿರುವ ಪ್ರಮುಖ ಕಾರಣವಾಗಿರುವ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರ ಬಗ್ಗೆ ಸಚಿವರು ಸಾಕಷ್ಟು ಬಾರಿ ತಿಳಿ ಹೇಳಿದ್ದಾರೆ. ಆದರೂ ಅವರು ಸುಧಾರಿಸದೇ ಇರುವುದು ಮಾತ್ರ ಸೋಜಿಗದ ಅಚ್ಚತಿಯಾಗಿದೆ.