ಧಾರವಾಡ: ಸ್ನೂಕರ ಆಡುತ್ತಿದ್ದಾಗಲೇ ಹಾರಿ ಹೋದ ಯುವಕನ “ಪ್ರಾಣಪಕ್ಷಿ”- ಸಿಸಿಟಿವಿಯಲ್ಲಿ ಸೆರೆ…!!!

ಧಾರವಾಡ: ಗೆಳೆಯರೊಂದಿಗೆ ಆಟದಲ್ಲಿ ತೊಡಗಿದ್ದ ಯುವಕನೋರ್ವ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಧಾರವಾಡದ ರಜತಗಿರಿಯಲ್ಲಿ ಸಂಭವಿಸಿದೆ.
ಸ್ನೂಕರ್ ಆಡುತ್ತಿದ್ದ ಸುಶಾಂತ್ ಮಲ್ಲಿಗೇರಿ ಎಂಬ ಯುವಕನೇ ಸಾವಿಗೀಡಾಗಿದ್ದು, ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.