ಧಾರವಾಡದಲ್ಲಿ ಬಿಗ್ ಟ್ವಿಸ್ಟ್- ಹಲ್ಲೆಗೊಳಗಾಗಿದ್ದನೆಂದು ಹೇಳಲಾಗಿದ್ದ ಸೋಮಶೇಖರ ಇದೀಗ “ಆರೋಪಿ ನಂಬರ್ ಒನ್”- 4ಕ್ಕೂ ಹೆಚ್ಚಿನವರಿಂದ ಹಲ್ಲೆ, ಜೀವ ಬೆದರಿಕೆ ಕೇಸ್…
1 min readಪ್ರಕರಣವನ್ನ ದಾರಿ ತಪ್ಪದ ಹಾಗೇ ನೋಡಿಕೊಳ್ಳುವಲ್ಲಿ ಉಪನಗರ ಠಾಣೆಯ ಇನ್ಸಪೆಕ್ಟರ್ ಯಶಸ್ವಿಯಾಗಿದ್ದಾರೆ
ಧಾರವಾಡ: ಕಳೆದ ಎರಡು ದಿನಗಳ ಹಿಂದೆ ಪ್ರಾಣಿ ರಕ್ಷಕ ಸೋಮಶೇಖರ ಎಂಬಾತನ ಮೇಲೆ ಹಲ್ಲೆ ನಡೆದಿದೆ ಎಂದು ಭಜರಂಗದಳ ಸೇರಿದಂತೆ ಹಿಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪ್ರಕರಣ ದಾಖಲು ಮಾಡುವಂತೆ ಹೋರಾಟ ನಡೆಸಿದ 24 ಗಂಟೆಯಲ್ಲಿ ಸೋಮಶೇಖರ ಸೇರಿದಂತೆ ಹಲವರ ಮೇಲೆಯೂ ಪ್ರಕರಣ ದಾಖಲಾಗಿರುವ ಘಟನೆ ಉಪನಗರ ಠಾಣೆಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೋ…
ಸೋಮಶೇಖರ ಮೇಲೆ ಹಲ್ಲೆ ನಡೆದಿದೆ ಎಂದು ಹೋರಾಟ ನಡೆಸಿದ ನಂತರ ಹಲವರ ಮೇಲೆ ಪ್ರಕರಣ ದಾಖಲಾಗಿತ್ತು. ಇದಾದ ಮರುದಿನ ನಿನ್ನೆ ತಡರಾತ್ರಿ ಪ್ರತಿದೂರು ಬಂದ ಹಿನ್ನೆಲೆಯಲ್ಲಿ ಸೋಮಶೇಖರ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದ್ದು, ಸೋಮಶೇಖರ ಎ1 ಆರೋಪಿಯಾಗಿದ್ದಾರೆ.
ಇದೇ ಪ್ರಕರಣದಲ್ಲಿ ಓರ್ವನು ತಾನು ಪ್ರಾಣ ಉಳಿಸಿದ್ದೇನೆ ಎಂದು ಹೇಳಿಕೊಂಡು ಪ್ರಚಾರ ಪಡೆಯುವ ತವಕದಲ್ಲಿ ವರ್ಷಕ್ಕೊಮ್ಮೆ ಧರಿಸುವ ಸಮವಸ್ತ್ರದ ಪೋಟೊಗಳನ್ನ ತನಗೆ ಗೊತ್ತಿರುವವರ ಮೂಲಕ ವೈರಲ್ ಮಾಡುವ ಯತ್ನ ನಡೆಸಿರುವ ಪ್ರಕರಣವೂ ಬೆಳಕಿಗೆ ಬಂದಿದೆ.
ಒಬ್ಬರ ಜೊತೆಗಿದ್ದು ಮತ್ತೊಬ್ಬರಿಗೆ ಮೋಸ ಮಾಡುವ ಜಾಯಮಾನ ಹೊಂದಿರುವ ಮನಸ್ಥಿತಿಗಳು ಕೂಡಾ ಈ ಪ್ರಕರಣದಲ್ಲಿ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವುದು ಅಸಹ್ಯದ ಪರಮಾವಧಿಯಾಗಿದೆ.
ನಿನ್ನೆ ರಾತ್ರಿ ನೀಡಿದ ದೂರನ್ನ ಗಣಿಸಾಬ ಬೇಪಾರಿ ಎನ್ನುವವರ ಸಲ್ಲಿಸಿದ್ದು, ಪೊಲೀಸರ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.