Posts Slider

Karnataka Voice

Latest Kannada News

ಧಾರವಾಡ ಜಿಲ್ಲೆ ಕಾಂಗ್ರೆಸ್‌ಗೆ “ಹೊಸ ಚೈತನ್ಯ” ಮೂಡಿಸಿದ ‘ಸಂತೋಷ ಲಾಡ’- ಬಿಜೆಪಿಯನ್ನ 20ವರ್ಷ ಹಿಂದೂಡಿದ “ಚಾಣಾಕ್ಷ”…

1 min read
Spread the love

ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಕಾರ್ಮಿಕ ಸಚಿವ ಸಂತೋಷ ಲಾಡ ಅವರ ಚಾಣಾಕ್ಷತೆಯಿಂದ ಧಾರವಾಡ ಜಿಲ್ಲೆಯ ರಾಜಕಾರಣದ ದಿಕ್ಕೇ ಬದಲಾಗಿದ್ದು, ಭಾರತೀಯ ಜನತಾ ಪಕ್ಷವನ್ನ ಇಪ್ಪತ್ತು ವರ್ಷದ ಹಿಂದಿನ ಲೀಡ್‌ಗೆ ತೆಗೆದುಕೊಂಡು ಹೋಗಿದ್ದಾರೆ.

ಹೌದು… ನೀವು ಕಳೆದ ಇಪ್ಪತೈದು ವರ್ಷದ ರಾಜಕಾರಣ ಗಮನಿಸಿದರೇ ಸತ್ಯ ಗೊತ್ತಾಗತ್ತೆ. ಈ ಹಿಂದಿನ ನಾಲ್ಕು ಚುನಾವಣೆಯಲ್ಲಿ ಬಿಜೆಪಿಯ ಅಂತರವನ್ನ ನೋಡಿದಾಗ ನಿಜ ಸ್ವರೂಪ ತಿಳಿಯಬಹುದು.

ಈ ವಿವರವನ್ನ ಗಮನಿಸಿ

2024

BJP- 716231

Congress- 618907

Lead- 97324

 

2019

BJP- 684837

Congress- 479765

Lead- 205072

 

2014

BJP- 545395

Congress- 431738

Lead- 113657

 

2009

BJP- 446786

Congress- 309123

Lead- 137663

 

2004

BJP- 385084

Congress- 302006

Lead- 83078

ಈ ಮೇಲಿನ ವಿವರವನ್ನ ನೋಡಿದ್ರೇ ಸತ್ಯ ಗೊತ್ತಾಗದೇ ಇರದು. ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದಲ್ಲಿ ಹಿಂದೆದೂ ಕಾಣದ ಲೀಡ್ ಬಿಜೆಪಿ ಪಡೆದಿದೆ. ಪಶ್ಚಿಮ ಕ್ಷೇತ್ರದಲ್ಲಿ ಅದೇ ಥರ ಆಗಿದೆ. ಕಲಘಟಗಿಯಲ್ಲಿ ಮೊದಲಿಂದಲೂ ಲೋಕಸಭಾ ಚುನಾವಣೆಗಳಲ್ಲಿ ಹೆಚ್ಚು ಮತಗಳು ಲಭಿಸುತ್ತ ಬಂದಿದೆ. ಈ ಸಲ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರೇನು ಮಾಡಿದ್ರು ಎಂಬುದನ್ನ ಅರಿತುಕೊಳ್ಳಬೇಕಿದೆ.

ಚಾಣಾಕ್ಷ ಸಂತೋಷ ಲಾಡ ಅವರು ಉರುಳಿಸಿದ ದಾಳಗಳು ಕಾಂಗ್ರೆಸ್‌ಗೆ ಮೊದಲ ಬಾರಿಗೆ ಬರೋಬ್ಬರಿ 618907 ಮತಗಳನ್ನ ತಂದಿದೆ. ಇದೇ ಸಂತೋಷ ಲಾಡ ಅವರು ಬಳ್ಳಾರಿಯಲ್ಲ ಇ.ತುಕಾರಾಂ ಅವರನ್ನ ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನ ಮರೆಯಲಾಗದು.

ಡಿ.ಕೆ.ನಾಯ್ಕರ ಅವರ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಗೆದ್ದೆ ಬಿಟ್ಟಿದೆ ಎನ್ನುವ ಮನಸ್ಥಿತಿಗೆ ಬರುವಂತೆ ಮಾಡುವಲ್ಲಿ ಯಶಸ್ಸು ಸಾಧಿಸಿದ್ದು ಸಂತೋಷ ಲಾಡ ಎಂಬುದನ್ನ ಅರಿತುಕೊಳ್ಳಬೇಕಿದೆ. ಚಾಣಾಕ್ಷ ಲಾಡ್, ಅವರ ರಾಜಕೀಯ ರೂಪುರೇಷೆ ಸದ್ದಿಲ್ಲದೇ ಸದ್ದು ಮಾಡಿದೆ. ಕೆಲವರು ಇದನ್ನೇ ತಪ್ಪಾಗಿ ಅರ್ಥೈಸಲು ಮುಂದಾಗಿದ್ದರಷ್ಟೇ.

ಭಾರತೀಯ ಜನತಾ ಪಕ್ಷದ ಜಿಲ್ಲೆಯ ನಾಯಕರು ಸಂತೋಷ ಲಾಡ್ ಅವರ ರಾಜಕೀಯ ದಾಳಗಳಿಂದ ದಂಗಾಗಿ ಹೋಗಿದ್ದು, ಕಾಂಗ್ರೆಸ್ ಮರಿ ಫುಡಾರಿಗಳು ಮಾತ್ರ “ಹಿತ್ತಲ ಗಿಡ ಮದ್ದಲ್ಲ” ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed