“ನಿರಂಜಿ ಅಂಕಲ್” ಪ್ರೆಸ್‌ಕ್ಲಬ್‌ಗೆ ಬಂದು “ಕ್ಲ್ಯಾರಿಫೀಕೇಷನ್” ಕೊಟ್ಟೋದ್ರು…!!!

ಹುಬ್ಬಳ್ಳಿ: ನಾನು ಮನೆಯಲ್ಲಿ ಜಾತಿ ಸರ್ಟಿಫಿಕೇಟ್ ಪ್ರಿಂಟ್ ಮಾಡಿಲ್ಲ. ಸರಕಾರದವರೇ ಕೊಟ್ಡಿದ್ದು. ನಾವೂ ಬೇಡ ಜಂಗಮರು ಹಾಗಾಗಿ ಮಗಳಿಗೆ ತೆಗೆದುಕೊಂಡಿದ್ವಿ. ಅಂಜಲಿ ಜೊತೆಗಿನ ಫೋಕ್ಸೊ ಆರೋಪಿ ವಿಜಯ ನನ್ನ ಪಿಎ ಹೌದು ಎಂದು ನೇಹಾ ಹಿರೇಮಠ ಅವರ ತಂದೆ ನಿರಂಜನ ಹಿರೇಮಠ ಹೇಳಿದರು.
ಮಗಳ ಕಳೆದುಕೊಂಡ ನಂತರ ಮೊದಲ ಬಾರಿಗೆ ಪ್ರೆಸ್‌ಕ್ಲಬ್ ವರಾಂಡದಲ್ಲಿ ಕಂಡು ನಿರಂಜನಯ್ಯ, ವಿವರಣೆ ಕೊಟ್ಟಿರುವ ವೀಡಿಯೋ ಇಲ್ಲಿದೆ ನೋಡಿ…
ಪಾಪ.. ವಿಜಯನಿಗೆ ತೊಂದರೆಯಿದೆ. ನನ್ನ ಜೊತೆಗೆ ಇರ್ತಾನೆ. ಅಂಜಲಿ ತಂಗಿಗೆ ಸಣ್ಣ ವಯಸ್ಸು ಮನೆ ಬಾಗಿಲಿಗೆ ಬಂದು ಕೂಡಬೇಕು ಅನ್ಕೋಂತಿದ್ದಾಳೆ ಎಂದರು.