Posts Slider

Karnataka Voice

Latest Kannada News

ಹುಬ್ಬಳ್ಳಿ: ವಯಸ್ಸು “36ರಾದರೂ” ಮದುವೆಯಾಗದ್ದರಿಂದ “ಆರಿದ ಆರತಿ”…!!!

1 min read
Spread the love

36 ಕಳೆದರೂ ಆಗದ ವಿವಾಹ; ನೇಣಿಗೆ ಶರಣಾದ ಮಹಿಳೆ

ಹುಬ್ಬಳ್ಳಿ: 36 ವರ್ಷ ಕಳೆದರೂ ವಿವಾಹ ಆಗದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಡಿಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯ ಬಿಡ್ನಾಳದಲ್ಲಿ ನಡೆದಿದೆ.

ಬಿಡ್ನಾಳದ ಹೇಮರೆಡ್ಡಿ ಕಾಲೋನಿಯಲಿ ವಾಸವಿದ್ದ 36 ವರ್ಷದ ಆರತಿ ಶಿರೋಳಕರ ಎಂಬ ಮಹಿಳೆಗೆ ವಿವಾಹವಾಗದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಂಡಿಗೇರಿ ಠಾಣೆಯ ಪೊಲೀಸರು ಭೇಟಿ ನೀಡಿ ಅಸಹಜ ಸಾವು ಪ್ರಕರಣ ದಾಖಲು ಮಾಡಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed