ಮತ ಹಾಕಲು “14095 KM” ನಿಂದ ಬಂದ ಹುಬ್ಬಳ್ಳಿಯ ರುಚಿತಾ ಆಲೂರ….!!!

ಹುಬ್ಬಳ್ಳಿ: ಒಂದು ಮತದ ಮಹತ್ವವೇನು ಎಂಬುದನ್ನ ಅರಿತ ವಿದ್ಯಾರ್ಥಿನಿಯೋರ್ವಳು ದೂರದ ಅಮೆರಿಕಾದಿಂದ ಬಂದು ಮತದಾನ ಮಾಡಿರುವ ಪ್ರಸಂಗ ಹುಬ್ಬಳ್ಳಿಯ ವಿಜಯನಗರದಲ್ಲಿ ನಡೆದಿದೆ.
ರುಚಿತಾ ಬಸವರಾಜ ಆಲೂರ ಎಂಬ ವಿದ್ಯಾರ್ಥಿನಿ ಮತ ಹಾಕಿದ ನಂತರ ಹೇಳಿದ್ದು ಇಲ್ಲಿದೆ ನೋಡಿ…
ತಂದೆ ಬಸವರಾಜ ಅವರು ಆಸಕ್ತಿ ವಹಿಸಿ ಮಗಳನ್ನ ಕರೆಸಿಕೊಂಡು ಮತವನ್ನ ಹಾಕಿಸಿ, ಮಗಳಿಗೆ ಅದರ ಮಹತ್ವ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.