ಧಾರವಾಡ ಅಂಜುಮನ್ ಸಂಸ್ಥೆಯಿಂದ ಬೃಹತ್ ಮೌನ ಪ್ರತಿಭಟನೆ: ಫಯಾಜ್‌ಗೆ ಕಠಿಣ ಶಿಕ್ಷ ನೀಡಲು ಆಗ್ರಹ…!!!
ಧಾರವಾಡ: ಬಿವಿಬಿ ಕ್ಯಾಂಪಸ್‌ನಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಖಂಡಿಸಿ ಧಾರವಾಡದ ಅಂಜುಮನ್ ಸಂಸ್ಥೆ ಹಾಗೂ ನಗರದ ಮುಸ್ಲಿಂ ಸಮುದಾಯದವರು ಬೃಹತ್ ಮೌನ ಮೆರವಣಿಗೆ ನಡೆಸಿ, ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಇಂದು ಬೆಳಿಗ್ಗೆಯಿಂದಲೇ ಅಂಗಡಿ ಮುಗ್ಗಟ್ಟುಗಳನ್ನ ಬಂದ್ ಮಾಡಿದ ಸಮುದಾಯದ ಜನರು, ಅಂಜುಮನ್ ಕಾಲೇಜಿನಿಂದ ಮೌನ ಮೆರವಣಿಗೆ ಆರಂಭಿಸಿದ್ದರು.
ವೀಡಿಯೋ…
ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಅರ್ಪಿಸಿದ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದರು.