Posts Slider

Karnataka Voice

Latest Kannada News

ಧಾರವಾಡ: ನಾಳೆಯಿಂದ “ಮೂರು ದಿನ” ಮಾರ್ಗ ಬದಲಾವಣೆ- ಪೊಲೀಸ್ ಕಮೀಷನರ್ ಆದೇಶ…

1 min read
Spread the love

ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಕೆ; ಧಾರವಾಡ ನಗರದಲ್ಲಿ ತಾತ್ಕಾಲಿಕವಾಗಿ ವಾಹನಗಳ ಮಾರ್ಗ ಬದಲಾವಣೆ- ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ

ಧಾರವಾಡ: ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ನಿಮಿತ್ತ ದಿನಾಂಕ 15.04.2024 ರಿಂದ 18.04.2024 ರವರೆಗೆ ಧಾರವಾಡ ನಗರದಲ್ಲಿ ತಾತ್ಕಾಲಿಕವಾಗಿ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳಗಾವಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುವ ವಾಹನಗಳು- ಜುಬ್ಲಿ ಸರ್ಕಲ್, ಸಿಎಸ್‍ಐ ಕಾಲೇಜ್ ರೋಡ, ಲೈನ ಬಜಾರ ಮುಖಾಂತರ ಎನ್.ಟಿ.ಟಿ.ಎಫ್ ಕ್ರಾಸ್ ಮುಖಾಂತರ ಹುಬ್ಬಳ್ಳಿ ಕಡೆಗೆ ಹೋಗಬೇಕು.

ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು- ಡಿಪೋ ಸರ್ಕಲ್, ಗೊಲ್ಲರ ಓಣಿ ಕ್ರಾಸ್, ಕಮಲಾಪೂರ ಉಸುಕಿನ ಅಡ್ಡಾ, ಮರಾಠಾ ಕಾಲನಿ ರೋಡ ಮುಖಾಂತರ ಹೋಗಬೇಕು.

ನವಲಗುಂದ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು- ಚರಂತಿಮಠ ಗಾರ್ಡನ್ ಕ್ರಾಸ್, ಕಾಮನಕಟ್ಟಿ ಕೂಟ, ಹೊಸ ಯಲ್ಲಾಪೂರ ಸರ್ಕಲ್, ಸುಣ್ಣದ ಬಟ್ಟಿ ರೋಡ ಮೂಲಕ ಎಲ್.ಎಮ್.ವಿ ವಾಹನಗಳು ಮತ್ತು ಹೆಬ್ಬಳ್ಳಿ ಅಗಸಿ, ಡಿಪೋ ಸರ್ಕಲ್, ಗೊಲ್ಲರ ಓಣಿ, ಮರಾಠಾ ಕಾಲನಿ ರೋಡ ಮೂಲಕ ಬಸ್ಸುಗಳು ಹೋಗಬೇಕು.

ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು- ದಾಸನಕೊಪ್ಪ ಸರ್ಕಲ್, ಜರ್ಮನ್ ಸರ್ಕಲ್, ಉಪನಗರ ಪಿ.ಎಸ್ ಮೂಲಕ ಹೋಗಬೇಕು.

ಗೋವಾ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು- ಜರ್ಮನ್ ಸರ್ಕಲ್, ಹಳೇ ಎಸ್.ಪಿ.ಆಪೀಸ್ ಕ್ರಾಸ್, ನಾಯಕ ಅಡ್ಡಾ ಕ್ರಾಸ್, ಹಳೇ ಬಸ್ ನಿಲ್ದಾಣ ಮೂಲಕ ಹೋಗಬೇಕು.
ಹುಬ್ಬಳ್ಳಿ ಮತ್ತು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ಬರುವ ವಾಹನಗಳು- ಕೋರ್ಟ ಸರ್ಕಲ್, ಕಾಸ್ಮಸ್ ಕ್ಲಬ್ ರೋಡ, ಲೈನ ಬಜಾರ, ಸಿಎಸ್‍ಐ ಕಾಲೇಜ್ ರೋಡ ಮತ್ತು ಬಾಗಲಕೋಟ್ ಪೆಟ್ರೋಲ್ ಪಂಪ, ಮಹಿಷಿ ರೋಡ, ಎಮ್ಮಿಕೇರಿ ಕ್ರಾಸ್, ಹೆಡ್ ಪೋಸ್ಟ ಆಪೀಸ್, ಕೋರ್ಟ ಸರ್ಕಲ್ ಮೂಲಕ ಸಂಚರಿಸಬೇಕೆಂದು ಮಹಾನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed