ಹುಬ್ಬಳ್ಳಿ: ರಹಸ್ಯ ಕಾರ್ಯಾಚರಣೆ, ಮೂವರು ಕೊಲೆಗಾರರ ಹೆಡಮುರಿ ಕಟ್ಟಿದ “ಸಿಂಗಂ” ಚೆನ್ನಣ್ಣನವರ…!!!
1 min readಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಸಾವಾಗಿರಬಹುದೆಂಬ ಸಂಶಯ ಬರುವ ರೀತಿಯಲ್ಲಿ ಹತ್ಯೆ ಮಾಡಿ ಪರಾರಿಯಾಗಿದ್ದ ಮೂವರನ್ನ 24 ಗಂಟೆಯಲ್ಲೇ ಹೆಡಮುರಿಗೆ ಕಟ್ಟುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಟೀಂ ಯಶ ಸಾಧಿಸಿದೆ.
ತಾರಿಹಾಳದ ಲೋಟಸ್ ಬಾರ್ ಹತ್ತಿರದ ಚಿಕ್ಕು ತೋಟದಲ್ಲಿ ಮೂಲತಃ ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ 55 ವರ್ಷದ ಷಣ್ಮುಖಪ್ಪ ಬಸಪ್ಪ ಹಡಪದ ಎಂಬಾತನ ಹತ್ಯೆಯಾಗಿತ್ತು. ಯಾವುದೇ ಸಾಕ್ಷ್ಯ ಸಿಗದ ಕಾರಣ, ಸಿಂಗಂ ಖ್ಯಾತಿಯ ಮುರುಗೇಶ ಚೆನ್ನಣ್ಣನವರ ತಂಡ, ರಹಸ್ಯ ಕಾರ್ಯಾಚರಣೆ ನಡೆಸಿ, ಮೂವರನ್ನ ಬಂಧಿಸಿದ್ದಾರೆ.
ಬಂಧಿತರನ್ನ ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದ ಪ್ರವೀಣ ಈರಪ್ಪ ಕುಬಿಹಾಳ, ಹನಮಂತ ದ್ಯಾಮಣ್ಣ ಮಾಳಗಿಮನಿ, ಸಹದೇವ ಹನಮಂತಪ್ಪ ನೂಲ್ವಿ ಎಂದು ಗುರುತಿಸಲಾಗಿದೆ. ಮೂವರು ಆರೋಪಿಗಳು 24, 25 ವಯಸ್ಸಿನವರಾಗಿದ್ದಾರೆ. ಕುಡಿದ ಮತ್ತಿನಲ್ಲಿ ಹತ್ಯೆ ಮಾಡಿದ್ದನ್ನ ಆರೋಪಿಗಳು ಒಪ್ಪಿಕೊಂಡಿದ್ದಾಗಿ ಮಾಹಿತಿ ನೀಡಲಾಗಿದೆ. ಬಂಧಿತರಿಂದ ಬೈಕ್ ಹಾಗೂ ನಾಲ್ಕು ಮೊಬೈಲ್‌ಗಳನ್ನ ವಶಕ್ಕೆ ಪಡೆಯಲಾಗಿದೆ.
ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ನೇತೃತ್ವದಲ್ಲಿ ಪಿಎಸ್ಐ ಸಚಿನ ಅಲಮೇಲಕರ, ಅಭಿಜಿತ, ಎಎಸ್ಐ ಎನ್.ಎಂ.ಹೊನ್ನಪ್ಪನವರ, ನಾರಾಯಣ ಹಿರೇಹೊಳಿ, ಸಿಬ್ಬಂದಿಗಳಾದ ಎ.ಎ.ಕಾಕರ, ಚೆನ್ನಪ್ಪ ಬಳ್ಳೊಳ್ಳಿ, ಸಿ.ಬಿ.ಜನಗಣ್ಣನವರ, ನಾಗಪ್ಪ ಸಂಶಿ, ವೈ.ಡಿ.ಕುಂಬಾರ, ನಾಗರಾಜ ಮಾಣಿಕ, ಪ್ರೇಮನಾಥ, ತಾಂತ್ರಿಕ ಸಿಬ್ಬಂದಿಗಳಾದ ಆರೀಫ ಗೋಲಂದಾಜ, ವಿಠ್ಠಲ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.