ಧಾರವಾಡ: “ಹೂ-ಹಾಸಿ” ಶ್ರೀ ಫಕೀರ ದಿಂಗಾಲೇಶ್ವರರ ಆಗಮನಕ್ಕೆ ಕಾಯುತ್ತಿರುವ ಭಕ್ತ ಸಮೂಹ…!!!

ಧಾರವಾಡ: ಕೇಂದ್ರ ಸರಕಾರದ ಹಾಲಿ ಸಚಿವರಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿಯವರ ವಿರುದ್ಧ ಹೇಳಿಕೆ ನೀಡಿರುವ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ಭಕ್ತರ ಸಭೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.
ಧಾರವಾಡದ ಸೇವಾಲಯದಲ್ಲಿ ನೂರಾರು ಭಕ್ತರು ಸೇರಿದ್ದು, ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ಬರುವಿಕೆಗಾಗಿ ಹೂವುಗಳನ್ನ ಅವರು ಬರುವ ದಾರಿಗೆ ಹಾಕಿ (ಹಾಸಿ) ಕಾಯುತ್ತಿದ್ದಾರೆ.
ವೇದಿಕೆಯಲ್ಲಿ ಒಂದೇ ಒಂದು ಆಸನವನ್ನ ಹಾಕಲಾಗಿದ್ದು, ಬೇರೆ ಯಾವುದೇ ಮಠದ ಸ್ವಾಮಿಗಳು ಬರುವ ಲಕ್ಷಣಗಳಿಲ್ಲ. ಧಾರವಾಡ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಹಾಗೂ ಅವಳಿನಗರದ ಪ್ರಮುಖರು ಜಮಾಯಿಸಿದ್ದಾರೆ.