50 ಸಾವಿರ ಲಂಚ: ACP ಚಾಲಕ, ಹೆಡ್‌ಕಾನ್ಸಟೇಬಲ್ ವಶಕ್ಕೆ…!!!
1 min readಗ್ಯಾಸ್ ಸಿಲಿಂಡರ್ ವಿತರಿಸಲು ಅನುಮತಿ
ಲಂಚದ ಬೇಡಿಕೆ
ಬೆಂಗಳೂರು : ಬೆಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಭೇಟೆಯಾಡಿದ್ದು, ಲಂಚ ಪಡೆಯುವಾಗ ಎಸಿಪಿ ಜೀಪ್ ಡ್ರೈವರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಪೀಣ್ಯ ಎಸಿಪಿ ಜೀಪ್ ಡ್ರೈವರ್ ನಾಗರಾಜ್ ಹಾಗೂ ಪೀಣ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಂಗಹನುಮಯ್ಯ 50 ಸಾವಿರ ಹಣ ಪಡೆಯುವಾಗ ರೆಡ್ಹ್ಯಾಂಡ್ ಲಾಕ್ ಆಗಿದ್ದಾರೆ.
ಚೇತನ್ ಎಂಬಾತ ಕೊಟ್ಟ ದೂರಿನ ಮೇಲೆ ಟ್ರ್ಯಾಪ್ ಮಾಡಲಾಗಿದ್ದು, ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲು ಅನುಮತಿ ನೀಡಲು ಜೀಪ್ ಡ್ರೈವರ್ ನಾಗರಾಜ್ ಹಾಗೂ ಪೀಣ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಂಗಹನುಮಯ್ಯ ಎರಡು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ 50 ಸಾವಿರ ಹಣ ಅಡ್ವಾನ್ಸ್ ಪಡೆಯುವಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಆರ್ ಎಂ ಸಿ ಯಾರ್ಡ್ ನಲ್ಲಿರುವ ಎಸಿಪಿ ಕಚೇರಿಯಲ್ಲಿ ಮುಂಗಡವಾಗಿ 50 ಸಾವಿರ ರೂಪಾಯಿ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಇನ್ಸ್ ಪೆಕ್ಟರ್ ವಿಜಯ ಕೃಷ್ಣ ಮತ್ತು ತಂಡ ಕಾರ್ಯಾಚರಣೆ ನಡೆಸಿದ್ದು, ಸದ್ಯ ಇಬ್ಬರನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.