ನವಲಗುಂದ: ವಿನೋದ ಅಸೂಟಿ ಮೇಲೆ ಬಿದ್ದ “ರಾಮಲಿಂಗ ಕಾಮಣ್ಣನ” ಮಾಲೆ- ವಿಜಯದ ಸಂಕೇತವೆಂದ ನೆರೆದ ಜನ…!!!

ನವಲಗುಂದ: ಪ್ರಸಿದ್ಧ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಹೋದ ಸಮಯದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಯ ಮೇಲೆ ಮಾಲೆ ಬಿದ್ದ ಪರಿಣಾಮ, ನೆರೆದ ಜನರು ಚಪ್ಪಾಳೆ ತಟ್ಟಿ ವಿಜಯದ ಸಂಕೇತವೆಂದು ಘೋಷಣೆ ಕೂಗಿದ ಘಟನೆ ನಡೆದಿದೆ.
ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ವೀಡಿಯೋ…
ಇದೇ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ, ಸ್ಥಳೀಯ ಶಾಸಕ ಎನ್.ಎಚ್.ಕೋನರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಮಲಿಂಗ ಕಾಮಣ್ಣನ ಸನ್ನಿಧಿಯಲ್ಲಿ ನಡೆದ ಈ ಘಟನೆಯೂ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಮೂಡಿದಂತೆ ಕಂಡು ಬಂತು.