ಧಾರವಾಡದ “PHQ” ಬಳಿ ಮರಕ್ಕೆ ಸ್ಕೂಟಿ ಡಿಕ್ಕಿ: ನ್ಯಾಯವಾದಿ ಪುತ್ರ ದುರ್ಮರಣ…!!!

ಧಾರವಾಡ: ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವಕನೋರ್ವ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಸಾವಿಗೀಡಾದ ಘಟನೆ ಧಾರವಾಡದ ಪೊಲೀಸ್ ಹೆಡ್ ಕ್ವಾರ್ಟರ್ಸ್ ಬಳಿಯ ಬೇಂದ್ರೆ ಗಾರ್ಡನ್ ಹತ್ತಿರ ಸಂಭವಿಸಿದೆ.
ಧಾರವಾಡದ ಕುಸುಮನಗರದ ಸಾಯಿರಾಮ್ ಎಂಬ ಯುವಕನೇ ಘಟನೆಯಲ್ಲಿ ಮರಣ ಹೊಂದಿದ್ದು, ಈತ ನ್ಯಾಯವಾದಿಯೋರ್ವರ ಪುತ್ರನಾಗಿದ್ದಾನೆ ಎಂದು ಹೇಳಲಾಗಿದೆ.
ಘಟನೆಯ ಬಗ್ಗೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರಮವನ್ನ ಜರುಗಿಸಿದ್ದಾರೆ.