ಧಾರವಾಡ “ಕೋಳಿಕೇರಿಯ ಕೋಳಿಜಗಳ”- ಕಂಗಾಲಾದ ಹೊಸಯಲ್ಲಾಪೂರ ಜನತೆ…!!!

ಧಾರವಾಡ: ನಗರದ ಹೊಸಯಲ್ಲಾಪೂರ ಪ್ರದೇಶದಲ್ಲಿನ ಕೋಳಿಕೇರಿಯ ಗೊಬ್ಬರದ ವಿಷಯವೀಗ ರಾಜಕೀಯñ ಪಡೆಸಾಲೆಯಲ್ಲಿ ಗಬ್ಬು ವಾಸನೆಯನ್ನ ಹರಡಿಸಿದ್ದು, ಸ್ಥಳೀಯರು ರಸ್ತೆ ಸಂಪರ್ಕ ಬಂದ್ ಮಾಡುವ ಮೂಲಕ ಬೀದಿಯಲ್ಲಿ ನಿಂತಿದ್ದಾರೆ.
ಕೋಳಿಕೇರಿಯ ಹೂಳನ್ನ ತೆಗೆಸಲು ಮುಂದಾದ ನಂತರ ನೂರಾರೂ ರೈತರು, ಕೆರೆಯಲ್ಲಿನ ಹೂಳನ್ನ ತಮ್ಮ ಹೊಲಕ್ಕೆ ತೆಗೆದುಕೊಂಡು ಹೋಗಲು ಪೈಪೋಟಿಗೆ ಬಿದ್ದರಲ್ಲದೇ ರಸ್ತೆಯುದ್ದಕ್ಕೂ ತಿಪ್ಪೆಯನ್ನ ಸೃಷ್ಟಿ ಮಾಡಿದರು.
ಇದರಿಂದ ರೋಸಿ ಹೋದವರು ವಿರೋಧಿಸಲು ಆರಂಭಿಸಿದರು. ಅಷ್ಟರಲ್ಲಿ ರಾಜಕೀಯ ಲೇಪ ಹಚ್ಚಿಕೊಂಡಿತು. ಹಾಗಾಗಿಯೇ ಪಾಲಿಕೆ ಆಯುಕ್ತರು ಸ್ಥಳಕ್ಕೆ ಬಂದು ಕಾನೂನಿನ ಪಾಠ ಮಾಡಿ ಹೋಗಿದ್ರು.
ಇಂದು ಮತ್ತೆ ಹಲವರು ಟ್ರ್ಯಾಕ್ಟರ್ ಮೂಲಕ ಹೂಳನ್ನ ತೆಗೆದುಕೊಂಡು ಹೋಗುತ್ತಿದ್ದು, ಸ್ಥಳೀಯರು ಇದರಿಂದ ರೋಸಿ ಹೋಗಿ ರಸ್ತೆಯನ್ನ ಬಂದ್ ಮಾಡಿದ್ದಾರೆ. ನೋಡಬೇಕಾದವರು ಈ ಕಡೆ ಸುಳಿಯುತ್ತಿಲ್ಲ.