ಗುರು ‘ಜಗದೀಶ ಶೆಟ್ಟರ್’ ಅವರ ಮನೆಗೆ ಕರೆತಂದ ‘ಮುನೇನಕೊಪ್ಪ’- ಕೆಲವೇ ಕ್ಷಣಗಳಲ್ಲಿ ನವದೆಹಲಿಯಲ್ಲಿ “ಅನೌನ್ಸ್”…
1 min readನವದೆಹಲಿ: ತೀವ್ರ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮತ್ತೆ ಮರಳಿ ಭಾರತೀಯ ಜನತಾ ಪಕ್ಷಕ್ಕೆ ಕೆಲವೇ ಕ್ಷಣಗಳಲ್ಲಿ ಸೇರಲಿದ್ದು, ನವದೆಹಲಿಯಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ನವದೆಹಲಿಯಲ್ಲಿದ್ದು, ಇನ್ನೇನು ಕೆಲವೇ ಜಗದೀಶ್ ಶೆಟ್ಟರ್ ಬಿಜೆಪಿಯ ತವರು ಮನೆಗೆ ಬರಲಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಹಾಗೂ ರುದ್ರೇಶ ಉಪಸ್ಥಿತರಿದ್ದು, ಅಮಿತ ಷಾ ಸೇರಿದಂತೆ ಹಲವರ ಭೇಟಿ ನಂತರ ಇದೇಲ್ಲವೂ ನಿರ್ಣಯವಾಗಿದೆ.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ವದಂತಿಯನ್ನ ಹಬ್ಬಿಸಲಾಗಿತ್ತು. ಅದಕ್ಕೆ ಕಾರಣವಾಗಿದ್ದು ಜಗದೀಶ ಶೆಟ್ಟರ್ ಅವರ ಜೊತೆಯಿದ್ದ ಸಂಪರ್ಕ. ಇದೇ ಸಂಬಂಧ ಈಗ ಬಿಜೆಪಿಗೆ ಮರಳಲು ಕಾರಣವಾಗಿದೆ.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರ ವಿರುದ್ಧ ಕ್ಷೇತ್ರದಲ್ಲಿ ಸುಳ್ಳು ವದಂತಿ ಹಬ್ಬಿಸಿದವರಿಗೆ ಮುಂದಿನ ದಿನಗಳಲ್ಲಿ ‘ಮಾರಿಹಬ್ಬ’ ನಡೆಯುವುದು ಸುಳ್ಳಲ್ಲ ಎಂದು ಹೇಳಲಾಗುತ್ತಿದೆ.