“ಕಮಲ ಕಲಿ” ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆ..!? ಮಾಜಿ ಸಿಎಂ ಜಗದೀಶ ಶೆಟ್ಟರ್ “ಖಡಕ್ ಟಾಕ್”…!!!

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಧಾರವಾಡ ಜಿಲ್ಲೆಯ ಹಿರಿಯ ನಾಯಕ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಖಡಕ್ ಆಗಿ ಉತ್ತರ ನೀಡುವ ಮೂಲಕ ಎದುರಾಳಿಗೆ ನೇರ ಉತ್ತರ ಕೊಟ್ಟಿದ್ದಾರೆ.
ಅವರ ಹೇಳಿಕೆಯನ್ನ ಸಂಪೂರ್ಣವಾಗಿ ನೋಡಿ…
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನ ಕರೆತರುವ ಯತ್ನವನ್ನೂ ತಾವೂ ಮಾಡಿಲ್ಲ, ಮಾಡುವುದು ಇಲ್ಲವೆಂದು ಸ್ಪಷ್ಟವಾಗಿ ಶೆಟ್ಟರ್ ಹೇಳಿದರು.
ಮಾಜಿ ಸಚಿವ ಮುನೇನಕೊಪ್ಪ ಅವರು ಪಕ್ಷ ತೊರೆಯುತ್ತಾರೆ ಎಂದು ಹಬ್ಬಿರುವ ವದಂತಿಯ ಹಿಂದೆ ಶೆಟ್ಟರ್ ಹೆಸರು ತಳಕು ಹಾಕುವ ಯತ್ನ ನಡೆಯುತ್ತಿದೆ. ಹೀಗಾಗಿಯೇ ಸ್ಪಷ್ಟವಾಗಿ ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿವರಣೆ ನೀಡಿದರು.