ಗ್ರಾಪಂ ಮಾಜಿ ಸದಸ್ಯನನ್ನ ಕತ್ತಿಯಿಂದ ಹತ್ಯೆಗೈದ ಶಿಕ್ಷಕ…!?

ಜಮೀನಿಗಾಗಿ ನಡೆದ ಕಾದಾಟ
ತಲೆಗೆ ಮಚ್ಚಿನೇಟು ಕೊಟ್ಟು ಪರಾರಿ
ಬೀದರ: ಆಸ್ತಿಗಾಗಿ ಗ್ರಾಮ ಪಂಚಾಯತಿ ಸದಸ್ಯನನ್ನ ಸರಕಾರಿ ಶಾಲೆಯ ಶಿಕ್ಷಕನೋರ್ವ ಹತ್ಯೆ ಮಾಡಿ ಪರಾರಿಯಾಗಿದ್ದಾನೆಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿರುವ ಪ್ರಕರಣ ಮನ್ನಾಏಖ್ಖೇಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಪಂ ಮಾಜಿ ಸದಸ್ಯ ರಾಜಗಿರಿ ಮಲ್ಲಪ್ಪ ಎಂಬಾತನನ್ನ ಶಿಕ್ಷಕ ಜಗದೀಶ ಹತ್ಯೆ ಮಾಡಿದ್ದಾರೆಂದು ಹೇಳಲಾಗಿದೆ.
ವೀಡಿಯೋ..
ಮೃತನ ಕುಟುಂಬಸ್ಥರು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆರೋಪಿಗಳ ಪೈಕಿ ಎಂಟು ಜನರನ್ನ ಪೊಲೀಸರು ಬಂಧಿಸಿದ್ದಾರೆ.