ಹೆಬಸೂರ ಬಳಿ “ಅಧ್ಯಕ್ಷ ಧಾಬಾ” ಮೇಲೆ ದಾಳಿ: ಅಕ್ರಮ “ದಾರೂ” ಪತ್ತೆ…!
1 min readಹುಬ್ಬಳ್ಳಿ: ಗ್ರಾಹಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಹೆಬಸೂರ ಬಳಿಯ ಅಧ್ಯಕ್ಷ ಧಾಬಾದಲ್ಲಿ ನಡೆದಿದೆ.
ಅಧ್ಯಕ್ಷ ಧಾಬಾದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ವಿವಿಧ ಕಂಪನಿಯ ಮದ್ಯವನ್ನ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಮಾರ್ಗದರ್ಶನದಲ್ಲಿ ಪಿಎಸ್ಐ ತಂಡ ದಾಳಿ ನಡೆದಿದೆ.
ದಾಳಿಯ ವೇಳೆ 134MC ವಿಸ್ಕಿ ಲಭಿಸಿದ್ದು, ಓರ್ವನನ್ನ ಬಂಧನ ಮಾಡಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.