ಹುಬ್ಬಳ್ಳಿ: ಬಡವರ “ಅಕ್ಕಿ” ಸಂದೀಪ ಜರತಾ”ಘರ”ದಲ್ಲಿ, ಸಿಸಿಬಿ ರೇಡ್… ‘ತಾಂದುಳ್’ ಸಮೇತ ಅರೆಸ್ಟ್…

ಹುಬ್ಬಳ್ಳಿ: ಬಡವರ ಕುಟುಂಬಕ್ಕೆ ಸೇರುವ ಅಕ್ಕಿಯನ್ನ ಒಂದೇಡೆ ಸಂಗ್ರಹಿಸಿದ್ದ ಖಚಿತ ಮಾಹಿತಿ ಆಧರಿಸಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್‌ನ ಸಿಸಿಬಿ ದಾಳಿ ನಡೆಸಿ ಆರೋಪಿ ಸಮೇತ ಲಕ್ಷಾಂತರ ರೂಪಾಯಿಯ ಅಕ್ಕಿಯನ್ನ ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹಾಗೂ ಡಿಸಿಪಿಗಳಾದ ರಾಜೀವ, ರವೀಶ ಅವರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ ತಂಡ ಕಾರ್ಯಾಚರಣೆ ನಡೆದಿದ್ದು, ಎಪಿಎಂಸಿಯ ಗೋಡೌನ್‌ದಲ್ಲಿ ಪತ್ತೆಯಾಗಿದೆ.
ಆರೋಪಿಯನ್ನ ಹುಬ್ಬಳ್ಳಿಯ ವೀರಾಪುರ ಓಣಿಯ ಸಂದೀಪ ಜರತಾರಘರ ಎಂದು ಗುರುತಿಸಲಾಗಿದ್ದು, ನಾಲ್ಕು ಲಕ್ಷ ಮೌಲ್ಯದ ಅಕ್ಕಿಯನ್ನ ವಶಕ್ಕೆ ಪಡೆಯಲಾಗಿದೆ.