ಕರ್ಲವಾಡದ ಬಳಿ ಭೀಕರ ಸರಣಿ ಅಪಘಾತ: ಐವರ ಸ್ಥಿತಿ ಗಂಭೀರ, ರಸ್ತೆಯುದ್ದಕ್ಕೂ ಬಿದ್ದ ಗಾಯಾಳುಗಳು…

ನವಲಗುಂದ: ಮರಳು ಖಾಲಿ ಮಾಡಿ ಹುಬ್ಬಳ್ಳಿಯಿಂದ ನವಲಗುಂದದತ್ತ ಹೊರಟಿದ್ದ ಟಿಪ್ಪರ್ ಚಾಲಕನ ನಿರ್ಲಕ್ಷ್ಯದಿಂದ ಸರಣಿ ಅಪಘಾತ ನಡೆದಿದ್ದು, ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಐವರ ಸ್ಥಿತಿ ಗಂಭೀರವಾಗಿದೆ.
ನವಲಗುಂದದಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳೀಯರು ಅವರನ್ನ ಹೊರಗೆ ತೆಗೆದು ಕಿಮ್ಸಗೆ ರವಾನೆ ಮಾಡಿದ್ದಾರೆ.
ಘಟನೆಯಲ್ಲಿ ಮಾಳವಾಡದಿಂದ ಹುಬ್ಬಳ್ಳಿ ಎಪಿಎಂಸಿಗೆ ಹೊರಟಿದ್ದ ಈರುಳ್ಳಿ ತುಂಬಿದ್ದ ಟಾಟಾ ಏಸ್ ವಾಹನ ಕೂಡಾ ಪಲ್ಟಿಯಾಗಿದ್ದು, ಅದರಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮಾಹಿತಿಯನ್ನ ಸಂಗೃಹಿಸುತ್ತಿದ್ದಾರೆ.