ಧಾರವಾಡ ಗ್ರಾಮೀಣ: ಸದ್ದಿಲ್ಲದ ನಡೆದ “ರಹಸ್ಯ ಕಾರ್ಯಾಚರಣೆ”- ಬಲೆಗೆ ಬಿದ್ದ ನಾಲ್ವರು…
1 min readಧಾರವಾಡ: ಶಾಲೆಯೂ ಸೇರಿದಂತೆ ಹಲವು ಸ್ಥಳಗಳಲ್ಲಿ ಕಳ್ಳತನ ಮಾಡುತ್ತಿದ್ದ ನಾಲ್ವರನ್ನ ಬಂಧನ ಮಾಡುವಲ್ಲಿ ಧಾರವಾಡ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಶಿವಾನಂದ ಕಮತಗಿ ತಂಡ ಯಶಸ್ವಿಯಾಗಿದೆ.
ಧಾರವಾಡ ತಾಲೂಕಿನ ಸೋಮಾಪುರದ ಅನುದಾನಿತ ಶಾಲೆ ಹಾಗೂ ಧಾರವಾಡದ ಸ್ಕ್ಯ್ರಾಫ್‌ದಲ್ಲಿ ಕಳ್ಳತನ ಮಾಡಿದ್ದ ಧಾರವಾಡದ ಹಾವೇರಿಪೇಟೆಯ ಆಟೋ ಚಾಲಕ ನಾಸೀರ ಖಾದರಸಾಬ ಖಾಜಿ, ಇಟಿಗಟ್ಟಿಯ ಗೌಂಡಿ ಶಂಕರ ಫಕ್ಕೀರಪ್ಪ ಓಕಾಟಿ, ಧಾರವಾಡದ ಹೊಟೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗೊಲ್ಲರ ಓಣಿಯ ತಿಮ್ಮ ಸ್ವಾಮಿ ಹಾಗೂ ನವನಗರದ ಪಂಚಾಕ್ಷರಿನಗರದ ಮಹ್ಮದಶಾಬಾಜ್ ರೆಹಮುತ್ತುಲ್ಲಾ ಬಾಲೇಬೈ ಎಂಬುವವರನ್ನ ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಆಟೋ, 70 ಸಾವಿರ ನಗದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಪರಿಕರಗಳನ್ನ ವಶಕ್ಕೆ ಪಡೆಯಲಾಗಿದೆ.
ಪಿಎಸ್ಐ ರೇಣುಕಾ ಐರಣಿಯವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಕೆ.ಎಚ್.ಕಾಂಬ್ಳೆ, ಅರ್ಜುನ ಠಕಾಯಿ, ನಾಗರಾಜ ಹಲಾವರ್, ಎನ್.ಬಿ.ಕಂಬೋಗಿ, ಶ್ರೀಶೈಲ ಕಾಜಗಾರ, ಕೃಷ್ಣ ವಿಭೂತಿ, ಮಹಾಂತೇಶ ನೆಟ್‌ಗಲ್, ಚಾಲಕ ವರದಾ, ಸಿದ್ಧು ಹಿರೇಮಠ, ಅಂಬರೀಷ ಹಿರೇಮಠ, ಚಿದಾನಂದ ಅಬ್ಬಿಗೇರಿ ದಾಳಿಯಲ್ಲಿ ಭಾಗವಹಿಸಿದ್ದರು.