ಧಾರವಾಡ: ಧರ್ಮಸ್ಥಳ ಸಂಸ್ಥೆ ಲೂಟಿ ಕೇಸ್: ಇನ್ನೂ ಸಿಗದ ಲಕ್ಷ ಲಕ್ಷ ಹಣ- ನಾಲ್ವರು ಪೊಲೀಸ್ ಕಸ್ಟಡಿಗೆ…!
1 min readಧಾರವಾಡ: ರಾಯಾಪುರದ ಬಳಿಯಿರುವ ಶ್ರೀ ಧರ್ಮಸ್ಥಳ ಸಂಸ್ಥೆಯಲ್ಲಿ ನಡೆದ ಕಳ್ಳತನ ಪ್ರಕರಣದ ಹತ್ತು ಆರೋಪಿಗಳನ್ನ ಬಂಧನ ಮಾಡಿದ್ದರೂ, ಇಲ್ಲಿಯವರೆಗೆ ಬಾಕಿ ಹಣ ಸಿಗದೇ ಇರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಹೌದು… ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ಟಸ್ಟ್‌ನ ಕಚೇರಿ ಕಳ್ಳತನವಾಗಿ ಹತ್ತು ಆರೋಪಿಗಳನ್ನ ಬಂಧಿಸಿದ್ದ ಪೊಲೀಸರು, ಕಳ್ಳತನವಾಗಿದ್ದ 12448087 (ಒಂದು ಕೋಟಿ ಇಪ್ಪತ್ನಾಲ್ಕು ಲಕ್ಷ ನಲ್ವತೆಂಟು ಸಾವಿರದಾ ಎಂಬತ್ತೇಳು) ರೂಪಾಯಿ, ಪೈಕಿ 7989870 (ಎಪ್ಪತ್ರೊಂಬತ್ತು ಲಕ್ಷ ಎಂಬತ್ರೋಂಬತ್ತು ಸಾವಿರದಾ ಎಂಟೂ ನಾರಾ ಎಪ್ಪತ್ತು) ರೂಪಾಯಿ ಮಾತ್ರ ಪತ್ತೆಯಾಗಿದೆ. ಇನ್ನುಳಿದ 4458217 (ನಾಲ್ವತ್ನಾಲ್ಕು ಲಕ್ಷದ ಐವತ್ತೆಂಟು ಸಾವಿರದಾ ಎರಡು ನೂರಾ ಹದಿನೇಳು) ರೂಪಾಯಿ ಸಿಗುತ್ತಿಲ್ಲ.
ಹೀಗಾಗಿಯೇ ಪ್ರಮುಖ ನಾಲ್ಕು ಆರೋಪಿಗಳನ್ನ ವಿದ್ಯಾಗಿರಿ ಠಾಣೆಯ ಪೊಲೀಸರು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಹಣ ರವಾನೆ ಮಾಡಿದ್ದ ಚೀಲವೊಂದು ನಾಪತ್ತೆಯಾಗಿರುವ “ಕೈ” ಪತ್ತೆ ಹಚ್ಚಲು ಪೊಲೀಸರು ಶ್ರಮ ಪಡುತ್ತಿದ್ದಾರೆ.
ಸಂಸ್ಥೆಯಲ್ಲಿ ಅಷ್ಟೊಂದು ಹಣವನ್ನಿಟ್ಟುಕೊಳ್ಳಲು ಪರವಾನಿಗೆ ಇರಲಿಲ್ಲ. ಅಷ್ಟೇ ಅಲ್ಲ, ಒಂದೇ ಒಂದು ಸಿಸಿಟಿವಿ ಕ್ಯಾಮರಾ ಇಲ್ಲದಿದ್ದರೂ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿದ್ದರು.