ಮನೆ, ಬೈಕ್ ಕಳ್ಳತನ: ಇಬ್ಬರನ್ನ ಜೈಲಿಗಟ್ಟಿದ್ದ ಹಳೇಹುಬ್ಬಳ್ಳಿ “ಇನ್ಸಪೆಕ್ಟರ್ ಸುರೇಶ ಯಳ್ಳೂರ” ಟೀಂ…
1 min readಹುಬ್ಬಳ್ಳಿ: ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅರವಿಂದನಗರದಲ್ಲಿ ಮನೆಯೊಂದನ್ನ ಕಳ್ಳತನ ಮಾಡಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಇನ್ಸಪೆಕ್ಟರ್ ಸುರೇಶ ಯಳ್ಳೂರ ಪಡೆ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನ ಅಸಾರ ಓಣಿಯ ಅಸ್ಲಂ ಘಂಟಿವಾಲೆ ಹಾಗೂ ಅರವಿಂದನಗರದ ರಾಜೇಶ ಶಿವಳ್ಳಿ ಎಂದು ಗುರುತಿಸಲಾಗಿದ್ದು, ಖದೀಮರಿಂದ ಚಿನ್ನ, ಬೆಳ್ಳಿ ಹಾಗೂ ಬೈಕ್ನ್ನ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನ ಬಂಧಿಸುವ ತನಿಖೆಯಲ್ಲಿ ಪಿಎಸ್ಐ ಎಸ್.ಎಸ್.ಬನ್ನಿಕೊಪ್ಪ, ಆರ್.ಎನ್.ಗುಡದರಿ, ಎಎಸ್ಐ ಪಿ.ಬಿ.ಕಾಳೆ, ಎ.ಪಿ.ಕಟ್ಟಳ್ಳಿ, ಐ.ಎಸ್.ಸಂಶಿ, ಎನ್.ಎ.ಕೆಂಚಣ್ಣನವರ, ಬಿ.ಎಂ.ಹೆದ್ದೇರಿ ಭಾಗಿಯಾಗಿದ್ದರು.