ಧಾರವಾಡ: ಹತ್ಯೆ ಮಾಡಿ ಠಾಣೆಗೆ ಬಂದಾಗಲೇ “ಹೆಣ ಹುಡುಕಲು” ನಿಂತ ಪೊಲೀಸರು…!

ಧಾರವಾಡ: ಹಲವರು ಕೂಡಿಕೊಂಡು ಹತ್ಯೆ ಮಾಡಿದ್ದೇವೆ ಎಂದು ಪೊಲೀಸ್ ಠಾಣೆಗೆ ಬಂದು ಹೇಳಿದಾಗಲೇ, ಪೊಲೀಸರು ಕೊಲೆಯಾಗಿ ಬಿದ್ದಿರುವ ಜಾಗ ಹುಡುಕಲು ಆರಂಭಿಸಿದ ಅಪರೂಪದ ಘಟನೆ ಧಾರವಾಡ ನಗರದಲ್ಲಿ ಸಂಭವಿಸಿದೆ.
ಕೊಲೆ ಮಾಡಿ ಮನೆಗೆ ಹೋಗಿದ್ದ ಆರೋಪಿಗಳು ಕೆಲವು ಗಂಟೆಗಳ ನಂತರ ನಗರದ ಪ್ರಮುಖ ಠಾಣೆಗೆ ಬಂದು, ತಾವು ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಅಸಲಿಗೆ ಹತ್ಯೆ ನಡೆದು ಹಲವು ಗಂಟೆಗಳು ಕಳೆದರೂ ಯಾವುದೇ ಮಾಹಿತಿ ಪೊಲೀಸರಿಗೆ ಗೊತ್ತಾಗಿರಲಿಲ್ಲ. ಅಷ್ಟೇ ಅಲ್ಲ, ಸಾರ್ವಜನಿಕರಿಗೂ ಶವ ಬಿದ್ದಿರುವುದು ಕಂಡು ಬಂದಿರಲಿಲ್ಲ.
ಘಟನೆಯ ಮಾಹಿತಿಯ ಸಾಕಷ್ಟು ತಿರುಳುಗಳು ಕರ್ನಾಟಕವಾಯ್ಸ್. ಕಾಂಗೆ ಲಭಿಸಿದ್ದು, ಕೆಲವೇ ಸಮಯದಲ್ಲಿ ಮಾಹಿತಿಯನ್ನ ಬಹಿರಂಗ ಮಾಡಲಿದೆ.