ಧಾರವಾಡದ “ಧರ್ಮಸ್ಥಳ ಸೊಸೈಟಿ”ಯಲ್ಲಿ “ಕೋಟಿಗೂ ಹೆಚ್ಚು” ಹಣ ಕಳ್ಳತನ- ದಂಗಾದ ಡಿಪಾರ್ಟ್‌ಮೆಂಟ್…

ಧಾರವಾಡ: ಕೋಟಿಗೂ ಹೆಚ್ಚು ಹಣವನ್ನ ಸೊಸಾಯಟಿಯಲ್ಲಿಟ್ಟು ಒಂದೇ ವೇಳೆಯಲ್ಲಿ ಸೆಕ್ಯೂರಿಟಿಗಳು ಊಟಕ್ಕೆ ಹೋದ ಸಮಯದಲ್ಲಿ ಕಳ್ಳತನ ನಡೆದ ಪ್ರಕರಣ ಧಾರವಾಡದ ರಾಯಾಪುರದಲ್ಲಿರುವ ಶ್ರೀ ಧರ್ಮಸ್ಥಳ ಸೊಸಾಯಟಿಯಲ್ಲಿ ಸಂಭವಿಸಿದೆ.
ಕೋಣೆಯ ಕಿಡಕಿಯೊಳಗಿಂದ ಬಂದಿರುವ ದುಷ್ಕರ್ಮಿಗಳು, ಲಾಕರ್ ಒಡೆದು ಹಣವನ್ನ ದೋಚಿದ್ದಾರೆ. ಸುಮಾರು ಒಂದು ಕೋಟಿ ಇಪ್ಪತೈದು ಲಕ್ಷ ರೂಪಾಯಿ ದೋಚಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಮಾಹಿತಿ ಸಿಗುತ್ತಿದ್ದ ಹಾಗೇ ವಿದ್ಯಾಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಪರಿಶೀಲನೆ ನಡೆಸುತ್ತಿದ್ದಾರೆ.
ಇಂತಹ ದೊಡ್ಡ ಸಂಸ್ಥೆಯ ಕಟ್ಟಡದಲ್ಲಿ ಸಿಸಿಟಿವಿ ಕ್ಯಾಮರಾಗಳಯ ಇಲ್ಲದೇ ಇರುವುದು ಮತ್ತಷ್ಟು ಅನುಮಾನ ಹುಟ್ಟಿಸಿದೆ.