ಗುತ್ತಿಗೆದಾರನ “ಅಪಹರಣ” ಕೇಸ್: ಇನ್ಸಪೆಕ್ಟರ್ ಅಶೋಕ ‘ಅರೆಸ್ಟ್’….

ಗುತ್ತಿಗೆದಾರನ ಅಪಹರಣ ಮಾಡಲು ಪ್ಲಾನ್
ಪೊಲೀಸರ ಕೈಯಿಂದ ಕೊಳ ತೊಡಗಿಸಿಕೊಂಡ ಇನ್ಸಪೆಕ್ಟರ್
ಹಾಸನ: ಗುತ್ತಿಗೆದಾರನೊಬ್ಬನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಆಂತರಿಕ ಭದ್ರತಾ ವಿಭಾಗದ ಇನ್ಸಪೆಕ್ಟರ್ ಒಬ್ಬರನ್ನ ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೆಡಿಎಸ್ ಮುಖಂಡ, ಶಾಸಕ ಎಚ್.ಡಿ.ರೇವಣ್ಣ ಅವರ ಆಪ್ತ ಗುತ್ತಿಗೆದಾರ ಅಶ್ವಥ್ ನಾರಾಯಣ ಎಂಬುವವರನ್ನೇ ಅಪಹರಣ ಸ್ಕೇಚ್ ಹಾಕಲಾಗಿತ್ತು. ಈ ಕುರಿತು ಮಾಹಿತಿ ಆಧರಿಸಿ ಪೊಲೀಸರು ತನಿಖೆ ಕೈಗೊಂಡ ಸಮಯದಲ್ಲಿ ಅಚ್ಚರಿಯ ಬೆಳವಣಿಗೆಯಾಗಿದೆ.
ಪೊಲೀಸ್ ಇನ್ಸಪೆಕ್ಟರ್ ಅಶೋಕ ಸೇರಿದಂತೆ ಬೆಂಗಳೂರು ಕುಡಿಯುವ ನೀರು ಸರಬರಾಜು ಏಜೆನ್ಸಿಯ ಸತೀಶ, ತೇಜಸ್ವಿ, ಅರವಿಂದ, ಮುರುಗನ್, ಮಧುಸೂದನ್ ಎಂಬುವವರನ್ನ ಬಂಧನ ಮಾಡಲಾಗಿದೆ. ಬಂಧಿತರಿಂದ ಮೂರು ಕಾರು, ಎಂಟು ಮೊಬೈಲ್ ಹಾಗೂ ಹಲವು ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.