ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯನ ಭೀಕರ ಹತ್ಯೆ…
 
        ಹರಿತವಾದ ಆಯುಧದಿಂದ ಇರಿದು ಕೊಲೆ
ರಸ್ತೆ ಮಧ್ಯದಲ್ಲಿ ಇರಿದು ಹತ್ಯೆ
ಕೋಲಾರ: ರಸ್ತೆಯಲ್ಲಿ ತಡೆದು ಗ್ರಾಮ ಪಂಚಾಯತಿ ಸದಸ್ಯನನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಪ್ರಕರಣ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್ ಬಳಿ ನಡೆದಿದೆ.
ಸುಮಾರು 40 ವರ್ಷದ ಅನಿಲ್ ಎಂಬ ಗ್ರಾಮ ಪಂಚಾಯತಿ ಸದಸ್ಯನೇ ಹತ್ಯೆಯಾದ ದುರ್ಧೈವಿಯಾಗಿದ್ದು, ಅನಿಲ ಮಿಣಸಂದ್ರ ಗ್ರಾಮದ ಸದಸ್ಯನಾಗಿದ್ದ.

ಕಾಂಗ್ರೆಸ್ ಪಕ್ಷದ ಬೆಂಬಲಿಗನಾಗಿರುವ ಅನಿಲ್‌ನ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ಆರಂಭಿಸಿದ್ದು, ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
                       
                       
                       
                       
                      
 
                         
                 
                 
                