ಬಾಡದ ರಜಾಕನ ಕೊಲೆ ಹಿಂದೆ “ಆಸ್ತಿ ಗಂಟು”….

ಧಾರವಾಡ: ತನ್ನ ಕೆಲಸಗಳನ್ನ ಮುಗಿಸಿಕೊಂಡು ಬೈಕಿನಲ್ಲಿ ಹೋಗುತ್ತಿದ್ದ ಕೆಇಬಿ ನೌಕರನನ್ನ ಹೊಂಚು ಹಾಕಿ ಹತ್ಯೆ ಮಾಡಿರುವ ಹಿಂದೆ ಆಸ್ತಿಯ ವಿವಾದವಿದೆ ಎಂದು ಹೇಳಲಾಗುತ್ತಿದೆ.
ರಜಾಕ ಕವಲಗೇರಿ ಬಾಡ ಗ್ರಾಮದ ನಿವಾಸಿಯಾಗಿದ್ದ. ಕೆಲವು ದಿನಗಳ ಹಿಂದೆ ಅದೇ ಗ್ರಾಮದ ರಾಜಕೀಯ ಮುಖಂಡೆಯೊಬ್ಬರ ಜೊತೆಗೂಡಿ ಬಂದು ರಾಜ್ಯದ ಪ್ರಭಾವಿ ಸಚಿವರೊಂದಿಗೆ ರಜಾಕ ಭಾವಚಿತ್ರ ತೆಗೆಸಿಕೊಂಡಿದ್ದ. ಆತನಿಗೆ, ಈ ಥರದ ಖಯಾಲಿಗಳು ಯಾಕಿದ್ದವು ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಬೇಕಿದೆ.
ಬಾಡ ಗ್ರಾಮದ ಆಸ್ತಿಯೊಂದಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ವಿವಾದ ಸೃಷ್ಟಿಯಾಗಿತ್ತು. ಕೆಲವು ಸಲ ಸ್ಥಳೀಯರು ಅದನ್ನ ಸರಿದೂಗಿಸುವ ಪ್ರಯತ್ನ ನಡೆಸಿದ್ದರೆಂದು ಹೇಳಲಾಗುತ್ತಿದೆ. ಆದರೆ, ಇದು ಇಷ್ಟೊಂದು ದೀರ್ಘಕ್ಕೆ ಹೋಗುವ ಬಗ್ಗೆ ಯಾರಿಗೂ ಸುಳಿವು ಸಿಕ್ಕಿಲ್ಲ.
ಹೊಂಚು ಹಾಕಿ ಹತ್ಯೆ ಮಾಡಿ ಪರಾರಿಯಾದವರನ್ನ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಮಹತ್ವದ ಸುಳಿವು ಸಿಕ್ಕಿದೆ ಎಂದು ಗೊತ್ತಾಗಿದೆ.