Posts Slider

Karnataka Voice

Latest Kannada News

ಹುಬ್ಬಳ್ಳಿ “ಪ್ರತಿಷ್ಠಿತ ಹೊಟೇಲ್ ಕುಕ್”ನ ‘ಕರ್ಮದ ಕಾಂಡ’… ಅಶ್ಲೀಲ ವೀಡಿಯೋ ವೈರಲ್…

Spread the love

ಹುಬ್ಬಳ್ಳಿ: ಕಾಮ ತೃಷೆಗಾಗಿ ಅಪ್ತಾಪ್ತ ಬಾಲಕರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ವಿಡಿಯೋ ಮಾಡ್ತಿದ್ದ ಕುಕ್‌ನನ್ನ ಹಿಡಿದು ಸಾರ್ವಜನಿಕರು ಬಡಿದ ಪ್ರಕರಣ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೇಲ್ ಕುಕ್‌ನ ಕಾಮದಾಟ ಬಯಲಾಗಿದ್ದು, ಅಪ್ರಾಪ್ತ ಮಕ್ಕಳಿಗೆ ಹಣದಾಸೆ ತೋರಿಸಿ ಕಾಮ ತೃಷೆ ತೀರಿಸಿಕೊಳ್ಳುತ್ತಿದ್ದನೆಂದು ಗೊತ್ತಾಗಿದೆ.


ಓರಿಸ್ಸಾ ಮೂಲದ ಕುಕ್ ನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಸ್ಥಳೀಯರು, ಅಶ್ಲೀಲ ವೀಡಿಯೋ ಮಾಡಿ ಅವುಗಳನ್ನ ಮಾರಾಟ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ.
ಹುಬ್ಬಳ್ಳಿಯ ಸಿದ್ಧಲಿಂಗೇಶ್ವರ ಕಾಲೋನಿಯಲ್ಲಿ ವಾಸ ಮಾಡ್ತಿದ್ದ ಕುಕ್, ಅಪ್ತಾಪ್ತ ಮಕ್ಕಳನ್ನ ಟಾರ್ಗೆಟ್ ಮಾಡುತ್ತಿದ್ದ. ಅವರಿಗೆ ಚಾಕೊಲೇಟ, ಹಣದ ಆಸೆ ತೋರಿಸಿ ಮಕ್ಕಳೊಂದಿಗೆ ಕಾಮದಾಟವಾಡಿ ವಿಡಿಯೋ ಮಾಡಿಕೊಳ್ಳುತ್ತಿದ್ದ.
ಕಾಮುಕನಿಗೆ ಥಳಿಸಿದ ಸಾರ್ವಜನಿಕರು ಹಳೇಹುಬ್ಬಳ್ಳಿ ಠಾಣೆ ಪೊಲೀಸರಿಗೆ ಕುಕ್‌ನನ್ನ ಒಪ್ಪಿಸಿದ್ದಾರೆ.

ವೈರಲ್ ಆಗಿರೋ ವೀಡಿಯೋ ತೀರಾ ಅಸಹ್ಯವಾಗಿದ್ದು, ಮಕ್ಕಳನ್ನ ಅತಿಯಾದ ರೀತಿಯಲ್ಲಿ ಕೆಟ್ಟದ್ದಾಗಿ ಬಳಕೆ ಮಾಡಿಕೊಳ್ಳಲಾಗಿದ್ದು, ಅವುಗಳನ್ನ ನೋಡುವ ಹಾಗಿಲ್ಲದ ಕಾರಣ ವೀಡಿಯೋ ಹಾಕಿಲ್ಲ..


Spread the love

Leave a Reply

Your email address will not be published. Required fields are marked *