ಧಾರವಾಡದಲ್ಲಿ ಅಪಘಾತ- ರಸ್ತೆಯುದ್ದಕ್ಕೂ ರಕ್ತಸಿಕ್ತವಾಗಿ ಬಿದ್ದ ನಾಲ್ವರು: ಮಾನವೀಯತೆ ಮೆರೆದ ಸುಧೀರ ಮುಧೋಳ…

ಧಾರವಾಡ: ನಗರದ ಬಾಗಲಕೋಟೆ ಪೆಟ್ರೋಲ್ ಬಂಕ್ ಬಳಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ತಡರಾತ್ರಿ ನಡೆದಿದ್ದು, ರಸ್ತೆಯಲ್ಲಿ ಬಿದ್ದಿದ್ದ ನಾಲ್ವರನ್ನ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸುಧೀರ ಮುಧೋಳ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.
ಇಡೀ ಘಟನೆಯ ಸಂಪೂರ್ಣ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…
ವೇಗವಾಗಿ ಬಂದ ಬೈಕೊಂದು ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದಿತ್ತು. ನಾಲ್ವರು ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಪೊಲೀಸರಷ್ಟೇ ಮಾಡಲಾಗದ್ದರಿಂದ ಅದೇ ಮಾರ್ಗದ ಮೂಲಕ ಹೊರಟಿದ್ದ ಸುಧೀರ ಮುಧೋಳ ಹಾಗೂ ಮತ್ತಿತರರು ಖಾಸಗಿ ವಾಹನದಲ್ಲಿ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿದರು.
ಅಪಘಾತದ ಬಗ್ಗೆ ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.