ಹೇಳುವುದು ಒಂದು.. ಮಾಡುವುದು ಇನ್ನೊಂದು… ನಂಬುವುದು ಹೇಗೋ ಕಾಣೆ…
1 min readಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದಲ್ಲಿನ ಹಲವು ಘಟನೆಗಳು ಉದ್ದೇಶಪೂರ್ವಕವಾಗಿ ನಡೆಯುತ್ತಿವೇಯೊ ಅಥವಾ ದುರದ್ದೇಶದಿಂದ ನಡೆಯುತ್ತಿವೇಯೊ ಎಂಬ ಜಿಜ್ಞಾಸೆ ಮೂಡಿಸಿದ್ದು, ಗೊಂದಲಗಳು ಸಾಮಾಜಿಕ ಜಾಲತಾಣದಲ್ಲಿ ಮುಂದುವರೆದಿದೆ.
ಬಕೆಟ್ ಚರ್ಚೆಗೆ ಕಾರಣವಾಗಿದ್ದ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಮಹೇಶ ಟೆಂಗಿನಕಾಯಿ ಅವರ ನೂತನ ಕಾರ್ಯಾಲಯದ ಉದ್ಘಾಟನೆಯ ಸಮಯದಲ್ಲಿ ಕೂಡಾ, ಗೊಂದಲ ಮುಂದುವರೆದಿದೆ.
ಟೆಂಗಿನಕಾಯಿ ಅವರ ಕಚೇರಿಯ ಕಾರ್ಯಕ್ರಮದ ಭಿತ್ತಿಪತ್ರದಲ್ಲಿ ಮೊದಲು ಧಾರವಾಡ ಜಿಲ್ಲೆಯ ಪ್ರಮುಖ ಬಿಜೆಪಿ ನಾಯಕರ ಭಾವಚಿತ್ರಗಳನ್ನ ಕೈ ಬಿಡಲಾಗಿತ್ತು. ಆದರೆ, ಕೆಲವು ಹೊತ್ತಿನ ಪ್ರಕರಣ ಚರ್ಚೆಗೆ ಕಾರಣವಾಗುತ್ತಿದೆ ಎಂಬುದು ಗೊತ್ತಾದ ನಂತರ ಮತ್ತೆ ಅದನ್ನ ಬದಲಾಯಿಸಲಾಗಿದೆ.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಭಾವಚಿತ್ರವನ್ನ ಮೊದಲ ಬಾರಿಗೆ ಟೆಂಗಿನಕಾಯಿ ಅವರ ಜೊತೆಗೆ ಬಂದಿದೆ. ಅರವಿಂದ ಬೆಲ್ಲದ್, ಪ್ರದೀಪ ಶೆಟ್ಟರ್, ಸೀಮಾ ಮಸೂತಿ, ಎಂ.ಆರ್.ಪಾಟೀಲ, ಅಶೋಕ ಕಾಟವೆ, ಬಸವರಾಜ ಕುಂದಗೋಳಮಠ, ಅಮೃತ ದೇಸಾಯಿ, ಎಸ್.ವಿ.ಸಂಕನೂರ, ಸಂಜಯ ಕಪಟಕರ ಅವರುಗಳ ಭಾವಚಿತ್ರಗಳನ್ನ ನಂತರದ ಸಮಯದಲ್ಲಿ ಜೋಡಿಸಲಾಗಿದೆ ಎಂದು ಹೇಳಲಾಗಿದೆ. ಹೀಗೇಕೆ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.