“ಹತ್ಯೆ ಹಿಂದಿನ ಸತ್ಯ” ಬಿಚ್ಚಿಟ್ಟ ಕಮೀಷನರ್: ಧಾರವಾಡ ಟ್ರಾಫಿಕ್ HC ಮಾಡಿದ್ದೇನು…!?

ಹುಬ್ಬಳ್ಳಿ: ನಗರದ ವೆಂಕಟೇಶ್ವರ ಕಾಲನಿಯಲ್ಲಿ ನಡೆದ ಯುವಕನ ಹತ್ಯೆಯ ಬಗ್ಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಸಂಪೂರ್ಣವಾದ ಮಾಹಿತಿ ತಿಳಿಸಿದ್ದಾರೆ.
ಹತ್ಯೆಯಾದ ಅಸ್ಲಂ, ಹತ್ಯೆ ಮಾಡಿದ ಮಂಜುನಾಥನ ಗೆಳೆಯ. ಪರಿಚತರು. ಸ್ಮಾರ್ಟ್ ವಾಚ್ ಸಂಬಂಧ ನಡೆದ ಗಲಾಟೆಯಲ್ಲಿ ಮನೆಗೆ ಹೋಗಿ ತರಕಾರಿ ಕತ್ತರಿಸುವ ಚಾಕು ತಂದು ಒಂದು ಬಾರಿ ಇರಿದಿದ್ದ. ಇದೇ ಕಾರಣದಿಂದ ಸಾವು ಸಂಭವಿಸಿದೆ ಎಂದು ಕಮೀಷನರ್ ಹೇಳಿದರು.
ವಿವರವಾಗಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಮಾತನಾಡಿದ್ದು ಇಲ್ಲಿದೆ ನೋಡಿ…
ಹತ್ಯೆ ಮಾಡಿ ಆಸ್ಪತ್ರೆಗೆ ಬಂದಿದ್ದ ಆರೋಪಿ ಮಂಜುನಾಥನನ್ನ ಕಿಮ್ಸನಲ್ಲಿ ಹಿಡಿದು ಹೆಡಮುರಿಗೆ ಕಟ್ಟಿದ್ದು ಧಾರವಾಡ ಸಂಚಾರಿ ಠಾಣೆಯ ಹೆಡ್‌ಕಾನ್ಸಟೇಬಲ್ ಮಲ್ಲಪ್ಪ ಮಲ್ಲಾಡದ.
ಹೌದು.. ಪ್ರಕರಣವೊಂದರ ಬಗ್ಗೆ ಮಾಹಿತಿ ಪಡೆಯಲು ಕಿಮ್ಸಗೆ ಹೆಡ್‌ಕಾನ್ಸಟೇಬಲ್ ಮಲ್ಲಾಡದ ಹೋದಾಗಲೇ ಕಿಮ್ಸನಲ್ಲಿ ವಿಷಯ ಗೊತ್ತಾಗಿದೆ. ಅಲ್ಲಿಯೇ ಇದ್ದ ಆರೋಪಿಯನ್ನ ತಕ್ಷಣವೇ ಹಿಡಿದು ಸಂಬಂಧಿಸಿದ ಪೊಲೀಸ್ ಠಾಣಾಧಿಕಾರಿ ಮಾಹಿತಿ. ಹೀಗಾಗಿ ಆರೋಪಿ ಪೊಲೀಸರ ಬಲೆಗೆ ಸರಳವಾಗಿ ಬಿದ್ದದ್ದು.
ಇಂತಹ ಸಿಬ್ಬಂದಿಗಳು ಇಲಾಖೆಯಲ್ಲಿ ಇರುವುದರಿಂದ ಸಾರ್ವಜನಿಕರು ಮತ್ತಷ್ಟು ನಿರಾಳವಾಗಿ ಇರಲು ಸಾಧ್ಯವಾಗಿದೆ.