PDOಗಳ ಅಸಹಕಾರ ಚಳುವಳಿ “ಸಧ್ಯಕ್ಕೆ ಕ್ಯಾನ್ಸಲ್”
1 min readಬೆಂಗಳೂರು: ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಅಸಹಕಾರ ಚಳುವಳಿ ನಡೆಸಲು ಮುಂದಾಗಿದ್ದ ಪಿಡಿಓಗಳ ಜೊತೆ ಸಚಿವರ ಮಾತನಾಡಿ, ಭರವಸೆ ನೀಡಿದ್ದರಿಂದ ಹೋರಾಟವನ್ನ ತಾತ್ಕಾಲಿಕವಾಗಿ ಹಿಂದೆ ಪಡೆಯಲು ಸಂಘ ನಿರ್ಧರಿಸಿದೆ.
ಸಂಘ ಮಾಡಿಕೊಂಡಿರುವ ಮನವಿ…
ಆತ್ಮೀಯರೇ…
ಮಾನ್ಯ ರಾಜ್ಯಾಧ್ಯಕ್ಷರ ಕೋರಿಕೆಯಂತೆ
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆರವರ ಅಧ್ಯಕ್ಷತೆಯಲ್ಲಿ ಇಂದು ಬೆಳ್ಳಿಗ್ಗೆ 12.30 ಕ್ಕೆ ವಿಕಾಸಸೌಧದಲ್ಲಿ ತುರ್ತು ಸಭೆಯನ್ನು ಹಮ್ಮಿಕೊಂಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಮುಖ ಬೇಡಿಕೆಗಳಾದ ಪಂ.ಅ.ಅಧಿಕಾರಿಗಳ ಜೇಷ್ಠತೆ ಅಂತಿಮಗೊಳಿಸಲು 2 ತಿಂಗಳ ಗಡುವು ನೀಡಿದ್ದರಿಂದ ಹಾಗೂ ಪಂ.ಅ.ಅಧಿಕಾರಿಗಳ ಹುದ್ದೆ ಮೇಲ್ದರ್ಜೆಗೆರಿಸುವುದರ ಬಗ್ಗೆ ಈಗಾಗಲೇ 694 ಹುದ್ದೆಗಳ ಮೇಲ್ದರ್ಜೆಗೆರಿಸುವ ಕಡತವು ಆರ್ಥಿಕ ಇಲಾಖೆಯಲ್ಲಿ ಇರುವುದರಿಂದ ಶೀಘ್ರದಲ್ಲೇ ಅನುಮೋದನೆ ಸಿಗುವುದರಿಂದ ಮತ್ತು ಬಾಕಿ ಉಳಿದ ಹುದ್ದೆಗಳನ್ನು ಈ ಹಿಂದೆ ಸಚಿವ ಸಂಪುಟದಲ್ಲಿ ಮಂಡನೆಗಿದ್ದ ಕಡತವನ್ನು ಪುನಃ ಸಚಿವ ಸಂಪುಟಕ್ಕೆ ಮಂಡಿಸಲು ಮಾನ್ಯ ಅಪರ ಮುಖ್ಯಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಿರುವುದರಿಂದ, ವರ್ಗಾವಣೆಯಲ್ಲಿ ಉಂಟಾದ ಗೊಂದಲವನ್ನು 7 ದಿನಗಳಲ್ಲಿ ಪೂರ್ಣಗೊಳಿಸುವುದಾಗಿ, ಉಳಿದ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಕಡ್ಡಾಯವಾಗಿ ಬಗೆಹರಿಕೊಡುವುದಾಗಿ ಸ್ಪಷ್ಟ ಭರವಸೆ ನೀಡಿದ್ದರಿಂದ ಈ ಸಭೆಯ ಅನುಪಾಲನೆಗಾಗಿ 2 ತಿಂಗಳ ಒಳಗಾಗಿ ಪುನಃ ಸಭೆ ಕರೆಯುವುದಾಗಿ ತಿಳಿಸಿರುವುದರಿಂದ ದಿನಾಂಕ:08/09/2023 ರಿಂದ ಹಮ್ಮಿಕೊಳ್ಳಲು ಉದ್ದೇಶಿಸಿರುವ ಅಸಹಕಾರ ಚಳುವಳಿಯನ್ನು ತಾತ್ಕಾಲಿಕವಾಗಿ 2 ತಿಂಗಳ ಕಾಲ ಮುಂದೂಡಲಾಗಿದೆ… ಸದರಿ ಬೇಡಿಕೆಗಳು ಈಡೇರದ್ದಿದರೆ.ಮುಂದಿನ ನಡೆ ಚರ್ಚಿಸಿ ತೀರ್ಮಾನಿಸಲಾಗುವುದು….
ಹರೀಶ್.ಡಿ
ರಾಜ್ಯ ಪ್ರಧಾನಕಾರ್ಯದರ್ಶಿ
KSPDOWA B’LORE