ಹುಬ್ಬಳ್ಳಿಯಲ್ಲಿ “ಬಿಜೆಪಿ ಪ್ರಮುಖರ ರಾಜೀನಾಮೆ” ಪರ್ವ ಆರಂಭ…

ಹುಬ್ಬಳ್ಳಿ: ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಅವರು ಪಕ್ಷದಲ್ಲಿನ ಹೊಂದಾಣಿಕೆ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬೆನ್ಬಲ್ಲೆ ಬಿಜೆಪಿಯ ಪ್ರಮುಖರೊಬ್ಬರು ರಾಜೀನಾಮೆ ನೀಡಿದ್ದಾರೆ.
ಭಾರತೀಯ ಜನತಾ ಪಕ್ಷದ ಮಹಾನಗರ ಪಲಾನುಭವಿಗಳ ಪ್ರಕೋಷ್ಟದ ಸಂಚಾಲಕ ಹನಮಂತಪ್ಪ ದೊಡ್ಡಮನಿ ರಾಜೀನಾಮೆಯನ್ನ ನೀಡಿದ್ದು, ವಾಟ್ಸಾಫ್ ಮೂಲಕ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಅವರಿಗೆ ಸಲ್ಲಿಸಿದ್ದಾರೆ.
ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿರುವ ದೊಡ್ಡಮನಿ ಅವರು, ಬಿಜೆಪಿಯ ಕೆಲವರ ನಡೆಯಿಂದ ಬೇಸತ್ತು ಇಂತಹ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.