“ಹಾರ್ಟ್ ಅಟ್ಯಾಕ್” ನರೇಂದ್ರದ ಸಣ್ಣ ವಯಸ್ಸಿನ ಸಂಗಮೇಶ ಕೋಮಾರದೇಸಾಯಿ ಇನ್ನಿಲ್ಲ….

ಧಾರವಾಡ: ಒಂದು ವರ್ಷ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವಕನೋರ್ವ ಹೃದಯಾಘಾತದಿಂದ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ನರೇಂದ್ರ ಗ್ರಾಮದ ಸಂಗಮೇಶ ಕೋಮಾರದೇಸಾಯಿ ಎಂಬ 34 ವರ್ಷದವರೇ ಸಾವಿಗೀಡಾಗಿದ್ದಾರೆ. ಇಂದು ಸಂಜೆ ಎದೆ ನೋವು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಮೃತ ಸಂಗಮೇಶ, ಬಿಜೆಪಿಯ ಮುಖಂಡ ಶಂಕರ ಕೋಮಾರದೇಸಾಯಿ ಅವರ ಸಂಬಂಧಿಯಾಗಿದ್ದು, ಇಡೀ ಗ್ರಾಮವೇ ಮಮ್ಮುಲ ಮರುಗುವಂತಾಗಿದೆ.