ಹುಬ್ಬಳ್ಳಿ-ಹೆಬ್ಬಳ್ಳಿ ಬಸ್ಗೆ ಲಾರಿ ಡಿಕ್ಕಿ- ಡ್ರೈವರ್ ಸೇರಿ ಐವರಿಗೆ ತೀವ್ರ ಗಾಯ…

ಹುಬ್ಬಳ್ಳಿ: ನಗರದಿಂದ ಹೆಬ್ಬಳ್ಳಿ ಗ್ರಾಮಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ಸಿಗೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ಶಿವಳ್ಳಿ ರಸ್ತೆಯ ಟೈಯರ್ ಗೋಡೌನ್ ಬಳಿ ಸಂಭವಿಸಿದೆ.
ಘಟನೆಯಲ್ಲಿ ಡ್ರೈವರ್ ಹಾಗೂ ನಾಲ್ಕು ಮಹಿಳೆಯರು ಗಾಯಗೊಂಡಿದ್ದು, ಅವರನ್ನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ.
ವೇಗವಾಗಿ ಬಂದ ಲಾರಿಯು ಎದುರು ಬದುರು ಡಿಕ್ಕಿ ಹೊಡೆದಿದ್ದು, ಬಸ್ ಹಾಗೂ ಲಾರಿ ಸಂಪೂರ್ಣ ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಪರಿಸ್ಥಿತಿಯನ್ನ ನಿಭಾಯಿಸುತ್ತಿದ್ದಾರೆ.