ಧಾರವಾಡ ಜಿಲ್ಲೆಯಲ್ಲಿ “ಸೋಮವಾರ” ಬಹುದೊಡ್ಡ ರಾಜಕೀಯ “ಮನ್ವಂತರ”…

ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ಮುಗಿದು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದ ನಂತರ ಧಾರವಾಡ ಜಿಲ್ಲೆಯಲ್ಲಿ ಹಲವು ಊಹಾಪೋಹಗಳು ನಡೆದಿದ್ದು, ಸೋಮವಾರ ಇದಕ್ಕೊಂದು ತಾರ್ಕಿಕ ಅಂತ್ಯ ಸಿಗಲಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗೆ ಸಂಬಂಧಿಸಿದಂತೆ ಬಹುದೊಡ್ಡ ನಿರ್ಧಾರವೊಂದು ಸೋಮವಾರ ವಾಣಿಜ್ಯನಗರಿಯಲ್ಲಿ ಹೊರ ಬೀಳಲಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಉಂಟಾಗುವ ಸಾಧ್ಯತೆಯಿದೆ.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ವೇಳೆಯಲ್ಲಿ ಕೆಲವು ನಿರ್ಧಾರಗಳ ಪೈಕಿ ಪ್ರಮುಖರು ಸೋಮವಾರ ಹೊರ ಹಾಕುವ ಸಾಧ್ಯತೆಯಿದೆ. ಈ ನಿರ್ಧಾರದ ಮೇಲೆ ಧಾರವಾಡ ಲೋಕಸಭಾ ಚುನಾವಣೆಯ ದಿಕ್ಕು ಬೇರೆಯದ್ದೆ ಸ್ವರೂಪ ಪಡೆಯಲಿದೆ ಎಂದು ಹೇಳಲಾಗುತ್ತಿದೆ.