ಧಾರವಾಡ: ಮಹಿಳೆಗೆ ಡಿಕ್ಕಿ ಹೊಡೆದು ‘ಕೋಮಾ’ಗೆ ಜಾರಿದ ಸವಾರ…!!

ಧಾರವಾಡ: ಎರಡು ತಿಂಗಳ ಹಿಂದಷ್ಟೇ ಬೈಕ್ ಖರೀದಿಸಿರುವ ವ್ಯಕ್ತಿಯೋರ್ವ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ, ಆಕೆಯ ಎರಡು ಕಾಲುಗಳು ಮುರಿದಿವೆ. ಇದರಿಂದ ಸವಾರ ಕೋಮಾಗೆ ಜಾರಿದ ಘಟನೆ ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲನಿ ಬಳಿ ನಡೆದಿದೆ.
ಜಗದೀಶ ಬಂಡಿವಾಡ ಎಂಬ ಸವಾರನೇ ಅಪಘಾತಪಡಿಸಿದ್ದು, ಗಾಯಾಳು ಮಹಿಳೆಯನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಘಟನೆಯ ನೋಡಿದ ಸವಾರ ಕೋಮಾಗೆ ಜಾರಿದ್ದು, ಆತನನ್ನ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಪ್ರಕರಣದ ಬಗ್ಗೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಮಾಹಿತಿ ಸಂಗ್ರಹಿಸಿ, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.