ಇನ್ನೂ “ಸುದ್ದ್ ಆಗಿಲ್ಲ” ಗ್ಯಾಸ್ ಲೀಕ್ ಘಟನೆ- ಟ್ಯಾಂಕರ್ ಸಿಲುಕಿದ್ದು ಹೇಗೆ… Exclusive Video

Exclusive Video Present Time
ಧಾರವಾಡ: ನಗರದ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗ್ಯಾಸ್ ಲೀಕ್ ಪ್ರಕರಣದ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಲಕ್ಷಾಂತರ ವಾಹನಗಳು ಕಳೆದ 12 ಗಂಟೆಯಿಂದ ರಸ್ತೆಯಲ್ಲಿ ಉಳಿದಿವೆ.
ಗ್ಯಾಸ್ ತೆಗೆದುಕೊಂಡು ಹೋಗುತ್ತಿದ್ದ ಲಾರಿಯು ಹೈಕೋರ್ಟ್ ಸೇತುವೆಯ ಕೆಳಗಡೆ ಸಿಲುಕಿಕೊಂಡಿದ್ದು, ಗ್ಯಾಸ್ ಹೇಗೆ ಲೀಕ್ ಆಗುತ್ತಿದೆ ಎಂಬುದರ ವೀಡಿಯೋ ಕರ್ನಾಟಕವಾಯ್ಸ್.ಕಾಂ ಗೆ ಲಭಿಸಿದೆ.
ಪ್ರಕರಣಕ್ಕೆ ಸುಖಾಂತ್ಯ ಹಾಡಲು ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದ್ದು, ಇನ್ನೂ ಕೆಲಕಾಲ ಕಾರ್ಯಾಚರಣೆ ಮುಂದುವರೆಯಲಿದೆ.
ಎರಡು ಬದಿಯಲ್ಲಿ ಲಕ್ಷಾಂತರ ವಾಹನಗಳು ನಿಂತಿದ್ದು, ಪೊಲೀಸರು ಗ್ಯಾಸ್ ಲೀಕ್ ಆಗಿರುವ ಟ್ಯಾಂಕರ್ ಹೊರಗೆ ತಗೆದ ನಂತರವೂ ಸಂಜೆಯವರೆಗೂ ಸಂಚಾರದ ಸಮಸ್ಯೆಯನ್ನ ಬಗೆಹರಿಸುವ ಸ್ಥಿತಿಯಿದೆ.