“ಗ್ಯಾಸ್ ಲೀಕ್” ಸುತ್ತಮುತ್ತಲಿನ “ಗ್ಯಾಸ್ ಒಲೆ ಬಂದ್”- ಕರೆಂಟ್ ಕ್ಲೋಸ್: ವಾಹನದಲ್ಲಿದ್ದವರ ಸ್ಥಿತಿ ಅಯೋಮಯ…

ರಸ್ತೆಯಲ್ಲಿ ಅನಾಥರಾದ ವಾಹನ ಸವಾರರು
ನಡು ರಸ್ತೆಯಲ್ಲಿ ಊಟವಿಲ್ಲದೇ ನಿಂತಿರುವ ಪೊಲೀಸರು
ಧಾರವಾಡ: ರಾಷ್ಟ್ರೀಯ ಹೆದ್ದಾರಿ ನಾಲ್ಕರ ಸೇತುವೆಯಲ್ಲಿ ನಡೆದಿರುವ ಘಟನೆಯೊಂದು, ಇನ್ನೂ ಕೂಡ ಕಾರ್ಯಾಚರಣೆಯಲ್ಲಿದ್ದು ಸುತ್ತಮುತ್ತಲಿನ ಜನರು ಕೂಡಾ ಆತಂಕದಲ್ಲಿರುವ ಹಾಗೇ ಕಾಣುತ್ತಿದೆ.
ಇಳಿಸಂಜೆಯಿಂದಲೇ ಆರಂಭಗೊಂಡಿರುವ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಹೈಕೋರ್ಟ್ ಸುತ್ತಲಿನ ಗ್ರಾಮದಲ್ಲಿ ಗ್ಯಾಸ್ ಒಲೆ ಹಚ್ಚದಂತೆ ತಿಳುವಳಿಕೆ ನೀಡಲಾಗಿದೆ. ಅಷ್ಟೇ ಅಲ್ಲ, ಕರೆಂಟ್ ಸ್ಥಗಿತಗೊಳಿಸಲಾಗಿದೆ.
ಜನರ ಹೇಳಿಕೆ…
ಪೊಲೀಸ್ ಇನ್ಸಪೆಕ್ಟರ್‌ಗಳಾದ ಮಲ್ಲನಗೌಡ ನಾಯ್ಕರ, ಶಿವಾನಂದ ಚಿಕ್ಕಮಠ, ಮಠಪತಿ ಸೇರಿದಂತೆ ಗರಗ ಠಾಣೆಯ ಸಮೀರ ಮುಲ್ಲಾ ಬೇರೆ ಬೇರೆ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.