ಕರ್ಲವಾಡದಲ್ಲಿ “ವಿಭಜನ ವಿಭೀಷಿಕ ಸ್ಮೃತಿ ದಿವಸ್” ಆಚರಣೆ…

ನವಲಗುಂದ: ಧಾರವಾಡ ಗ್ರಾಮಾಂತರ ಜಿಲ್ಲಾ ಯುವ ಮೋರ್ಚಾ ನೇತೃತ್ವದ ನವಲಗುಂದ ಮಂಡಲದಲ್ಲಿ ನಡೆದ ವಿಭಜನ ವಿಭೀಷಿಕ ಸ್ಮೃತಿ ದಿವಸ್ ಕಾರ್ಯಕ್ರಮ ಕರ್ಲವಾಡ ಗ್ರಾಮದಲ್ಲಿ ನಡೆಯಿತು.
ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳು, ಹಿರಿಯರು, ಯುವ ಮೋರ್ಚಾ ಸದಸ್ಯರು ಸೇರಿದಂತೆ ಗ್ರಾಮಸ್ಥರು ರಾಷ್ಟ್ರಧ್ವಜ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಹಿಡಿದು ಭಾರತ ಮಾತೆಗೆ, ದೇಶ ಭಕ್ತರಿಗೆ ಘೋಷಣೆ ಕೂಗುತ್ತಾ ಪಂಜಿನ ಮೆರವಣಿಗೆ ನಡೆಸಿದರು.
ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ರಾಷ್ಟ್ರಪ್ರೇಮವನ್ನು ಮೆರೆಯಲಾಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ಕುಂದಗೋಳಮಠ, ನವಲಗುಂದ ತಾಲೂಕ ಯುವ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಸಂಗನಗೌಡ್ರ, ಗ್ರಾಮ ಪಂಚಾಯತ್ ಸದಸ್ಯರಾದ ದೇವರಾಜಸ್ವಾಮಿ ಹಿರೇಮಠ, ಡಾ. ಕೃಷ್ಣಾ ಕೊಣ್ಣೂರ, ನಿಂಗಪ್ಪ ತಳವಾರ, ಪ್ರವೀಣ ಕುಂದಗೋಳ, ಅರುಣಕುಮಾರ ಮೆಣಸಿನಕಾಯಿ ಸೇರಿದಂತೆ ಹಲವರು ಭಾಗವಹಿಸಿದ್ದರು.